
ಚಿಕ್ಕಬಳ್ಳಾಪುರ(ಅ.26): ಆಕೆ ಎಂಬಿಎ ಪಧವೀದರೆ. ಆತ 74 ವರ್ಷದ ಅಜ್ಜ. ಕೆಲಸಕೊಡೋದಾಗಿ ನಂಬಿಸಿ ಈ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಾನು ತಮಿಳುನಾಡು ಸಿಎಂ ಜಯಲಿತಾ ಪಿಎ ಆಗಿದ್ದವನು. ಅಂತಾ ಬೆದರಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಈತ ನೀನು ನನ್ನ ಹೆಂಡತಿಯಾಗಿರು ಅಂತಾ ಬೆದರಿಕೆ ಕೂಡ ಹಾಕಿದ್ದಾನೆ.
ಬಡತನದಲ್ಲಿ ಹುಟ್ಟಿದ್ದರು ಕಷ್ಟಪಟ್ಟು ಎಂಬಿಎ ಪದವಿ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಯುವತಿಯನ್ನು ತಮಿಳುನಾಡಿನ ಶಣ್ಮುಗ ಮೂರ್ತಿ ಎಂಬ 74 ವರ್ಷ ಅಜ್ಜ ನಾನು ತಮಿಳುನಾಡು ಸಿಎಂ ಪಿಎ ಆಗಿದ್ದವನು, ನನಗೆ ಚನೈನಲ್ಲಿ ದೊಡ್ಡ ಕಂಪನಿ ಇದೆ, ಬೆಂಗಳೂರಿನಲ್ಲಿ ಕಂಪನಿ ಓಪನ್ ಮಾಡ್ತಿನಿ ಅಂತಾ ಕೆಲಸಕ್ಕೆ ಸೇರಿಸಿಕೊಂಡಿದ್ದಾನೆ. ಬಳಿಕ ಈಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೇ, ಈಗಲೂ ಕೂಡ ನನ್ನ ಜೊತೆಯಲ್ಲೆ ಇರಬೇಕೆಂದು ಒತ್ತಾಯ ಮಾಡುತ್ತಿದ್ದಾನೆಂದು ಯುವತಿ ಆರೋಪಿಸಿದ್ದಾಳೆ. ಅಲ್ಲದೇ, ಕಳೆದ ಆರೇಳು ವರ್ಷಗಳಿಂದ ನನಗೆ ಬೆದರಿಕೆ ಹಾಕಿಕೊಂಡು ಬರುತ್ತಿದ್ದಾನೆಂದು ಆರೋಪಿಸಿದ್ದಾಳೆ.
ಇನ್ನೂ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಶಣ್ಮುಗ ಮೂರ್ತಿ.ಈ ಯುವತಿಗೆ ಮೇಸೆಜ್ ಗಳ ಮೂಲಕ ಎದರಿಕೆ ಹಾಕುತ್ತಿದ್ದಾನೆ. ನೀನು ಬರಲಿಲ್ಲಾ ಅಂದ್ರೆ ನನ್ನ ಪತ್ನಿಯನ್ನು ಹುಡುಕಿಕೊಡಿ ಅಂತಾ ಜಾಹೀರಾತು ನೀಡುವ ಬೆದರಿಕೆ ಹಾಕಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ನ್ಯಾಯ ಒದಗಿಸುವಂತೆ ಮಹಿಳಾ ಸಾಂತ್ವನಾ ಕೇಂದ್ರದ ಮೊರೆ ಹೋಗಿದ್ದಾಳೆ.
ಇನ್ನೂ ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ಏನೇ ಆದ್ರು 74 ರ ಅಜ್ಜ ಇಂತಹ ಅಮಾಯಕ ಯುವತಿಯನ್ನು ನಂಬಿಸಿ ದ್ರೋಹ ಬಗೆದಿರುವುದು ದುರದೃಷ್ಟವೇ ಸರಿ.
ವರದಿ: ರವಿಕುಮಾರ್ ವಿ, ಸುವರ್ಣ ನ್ಯೂಸ್
Click Here :ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.