ಮೈತ್ರಿ ಸರ್ಕಾರದ ಹಣೆಬರಹ ಬರೆಯಲಿರುವ ಅಕ್ಟೋಬರ್ 3!

By Web DeskFirst Published Sep 17, 2018, 3:12 PM IST
Highlights

ರಾಜಕೀಯ ಬೆಳವಣಿಗೆಗಳಿಗೆ ಕೊನೆಯೆ ಇಲ್ಲದಂತಾಗಿದೆ. ಹಾಗಾದರೆ ಅಕ್ಟೋಬರ್ ಮೂರು ಮೈತ್ರಿ ಸರ್ಕಾರದ ಹಣೆಬರಹ ಬರೆಯಲಿದೆಯೇ? ಎಂಬ ಪ್ರಶ್ನೆಯೂ ಎದುರಾಗಿದೆ. ಏನಿದು ಅಕ್ಟೋಬರ್ 3ರ ಮರ್ಮ

ಬೆಂಗಳೂರು(ಸೆ.17) ಒಂದೆಡೆ ಆಪರೇಶನ್ ಕಮಲದ ವಿಚಾರ ರಾಜಕೀಯ ಚಿತ್ರಣ ಬದಲು ಮಾಡುತ್ತಿದ್ದರೆ ಬಿಜೆಪಿಯ ಆಪರೇಶನ್ ಕಮಲಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಟೆಸ್ಟ್ ರನ್ ಮಾಡಲು ಮುಂದಾಗಿದೆ. ಅಕ್ಟೋಬರ್ ಮೂರು ಎನ್ನುವುದಕ್ಕೂ ಕಾರಣ ಇದೆ

ಆಪರೇಷನ್ ಕಮಲಕ್ಕೆ ಈಡಾಗಿರುವ ಶಾಸಕರೆಷ್ಟು? ಮೈತ್ರಿ ಸರ್ಕಾರದ ಜೊತೆ ಇರುವ ಶಾಸಕರೆಷ್ಟು? ಎನ್ನುವ ಮಾಹಿತಿಯನ್ನು ಸ್ವತಃ ಕಾಂಗ್ರೆಸ್ ಲೆಕ್ಕ ಹಾಕಲು ಮುಂದಾಗಿದೆ. ವಿಧಾನ ಪರಿಷತ್ ಗೆ ಅಕ್ಟೋಬರ್ 3 ರಂದು ಚುನಾವಣೆ ನಡೆಯಲಿದೆ. ವಿಧಾನ ಸಭಾ ಸದಸ್ಯರು ಈ ಚುನಾವಣೆಯಲ್ಲಿ ಮತ ಹಾಕಲಿದ್ದಾರೆ ಎನ್ನುವ ಆಧಾರ ಅಂದು ಸಿಗಲಿದೆ.

ಬಿಜೆಪಿ ಪರ ಕ್ರಾಸ್ ವೊಟಿಂಗ್ ಆದ್ರೆ ಅವರು ಆಪರೇಷನ್ ಕಮಲಕ್ಕೆ ಒಳಗಾಗುತ್ತಿದ್ದಾರೆ ಅನ್ನುವುದು ಸ್ಪಷ್ಟವಾಗಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪರಿಷತ್ ಚುನಾವಣೆಯನ್ನ ಎದುರುನೋಡುತ್ತಿದ್ದು ಮೈತ್ರಿ ಸರ್ಕಾರದ ಭವಿಷ್ಯ ಅಕ್ಟೋಬರ್ 3 ರಂದೇ ಫೈನಲ್ ಆಗಲಿದೆ ಎನ್ನುತ್ತಿವೆ ಮೂಲಗಳು..

ಬಿಜೆಪಿ ತೆಕ್ಕೆಗೆ ಸೇರಿದ ಮಲೆನಾಡ ಕಾಂಗ್ರೆಸ್ ಶಾಸಕ

ಅಕ್ಟೋಬರ್ 3 ರಂದು ಕಾಂಗ್ರೆಸ್ ಪರ ಎಷ್ಟು ಶಾಸಕರು ಬಂದು ಮತ ಹಾಕ್ತಾರೆ ಅನ್ನೋ ಕುತೂಹಲ ಕಾಂಗ್ರೆಸ್ ನಲ್ಲೇ ಮನೆ ಮಾಡಿದೆ. ಪರಿಷತ್ ಚುನಾವಣೆಗೂ ಮೊದಲೇ ಹೈಕಮಾಂಡ್ ಜೊತೆ ಚರ್ಚೆಗೆ ಮುಂದಾದ ಕಾಂಗ್ರೆಸ್ ನಾಯಕರು. ಇದೇ ತಿಂಗಳ 19 ರಂದು ರಾಹುಲ್ ಜೊತೆ ಚರ್ಚೆಗೆ ಸಮಯ ಕೇಳಿರುವ ಕೈ ನಾಯಕರು.. ಅಂದು ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಕುರಿತು ರಾಹುಲ್ ಗಾಂಧಿ ಜತೆಗೂ ಕೈ ನಾಯಕರು ಚರ್ಚೆ ಮಾಡಲಿದ್ದಾರೆ.

click me!