
ಬೆಂಗಳೂರು (ಸೆ.25): ಕಬ್ಬನ್ ಪಾರ್ಕ್ಗೆ ಹೋಗುವ ಪ್ರೇಮಿಗಳು ಇನ್ಮುಂದೆ ತುಂಬಾ ಎಚ್ಚರದಿಂದ ಇರಬೇಕು. ಯಾಕಂದ್ರೆ ಕಬ್ಬನ್ ಪಾರ್ಕನಲ್ಲಿ ಪ್ರೇಮಿಗಳ ಚೆಲ್ಲಾಟದ ಮೇಲೆ ಕಣ್ಗಾವಲಿದೆ.
ಅನೈತಿಕ ಚಟುವಟಿಕೆಗೆ ಬ್ರೇಕ್ ಹಾಕಲು ಅಧಿಕಾರಿಗಳು ಸಿಸಿಟಿವಿ ಅಳವಡಿಸಲು ನಿರ್ಧರಿಸಿದ್ದಾರೆ. 300 ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕ್ಗೆ ಸಿಸಿಟಿವಿ ಕ್ಯಾಮರಾ, ಎಲ್ಇಡಿ ಲೈಟ್ಸ್, ಆಡಿಯೋ ಸಿಸ್ಟಮ್ ಅಳವಡಿಕೆಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಿಸಿಟಿವಿ ಜೊತೆ ಅನೈತಿಕ ಚಟುವಟಿಕೆ ಕಂಡುಬಂದರೆ ಮೈಕ್ನಲ್ಲಿ ಎಚ್ಚರಿಕೆ ನೀಡಲಾಗುತ್ತೆ. ಮಹಿಳೆಯರ ರಕ್ಷಣಾ ದೃಷ್ಟಿಯಿಂದ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಿಸಿಟಿವಿ ರೂಲ್ಸ್ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.