ಜಲ್ಲಿಕಟ್ಟು ಆಚರಣೆಗೆ ವಿರೋಧ; ಪೊಲೀಸರ ಮೇಲೆ ಹೋರಿಗಳನ್ನು ಬಿಟ್ಟು ಗ್ರಾಮಸ್ಥರಿಂದ ದಾಂಧಲೆ

By Suvarna Web DeskFirst Published Feb 18, 2018, 1:24 PM IST
Highlights

ಜಲ್ಲಿಕಟ್ಟು ಆಚರಣೆ ವಿರೋಧ ಮಾಡಿದಕ್ಕೆ ಗ್ರಾಮಸ್ಥರೇ ಪೊಲಿಸರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ   ಆನೇಕಲ್ ಇಂಡ್ಲವಾಡಿ ಗ್ರಾಮದ ಬಳಿ ನಡೆದಿದೆ. 

ಬೆಂಗಳೂರು(ಫೆ.17): ಜಲ್ಲಿಕಟ್ಟು ಆಚರಣೆ ವಿರೋಧ ಮಾಡಿದಕ್ಕೆ ಗ್ರಾಮಸ್ಥರೇ ಪೊಲಿಸರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ   ಆನೇಕಲ್ ಇಂಡ್ಲವಾಡಿ ಗ್ರಾಮದ ಬಳಿ ನಡೆದಿದೆ. 


ಗ್ರಾಮದಲ್ಲಿ ಜಲ್ಲಿಕಟ್ಟು ನಡೆಸಲು ತಮಿಳುನಾಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ  500 ಕ್ಕೂ ಹೆಚ್ಚು ಹೋರಿಗಳನ್ನು ಕರೆ ತರಲಾಗಿತ್ತು.  ಆದರೆ ಪೊಲೀಸರು ಇದಕ್ಕೆ ವಿರೋಧಿಸಿದ್ದರು. ಅವಕಾಶ ಕೊಡಲಿಲ್ಲ ಎಂದು ಸಿಟ್ಟಿಗೆದ್ದ ಗ್ರಾಮಸ್ಥರು ಆನೇಕಲ್ ಹಾಗು ಬನ್ನೇರುಘಟ್ಟ ಪೊಲೀಸರ ಮೇಲೆ ಹೋರಿಗಳನ್ನು ಬಿಟ್ಟು ದಾಂಧಲೆ ನಡೆಸಿದ್ದಾರೆ. 

ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ  ನಿರ್ಮಾಣವಾಗಿದೆ.  ಗಂಭೀರ ಗಾಯಾಗಾಳದ ಪೊಲೀಸರನ್ನ ಸ್ಥಳೀಯ ಆಸ್ಪತ್ರೆ ಗೆ ರವಾನೆ ಮಾಡಲಾಗಿದೆ. 

(ಸಾಂದರ್ಭಿಕ ಚಿತ್ರ)

 

click me!