
ಶಿವಮೊಗ್ಗ(ಆ. 30): ಸರ್ಕಾರ ಎಷ್ಟೇ ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸಿದ್ರೂ ಕರ್ನಾಟಕ ಪೊಲೀಸರ ಜೀತಪದ್ದತಿ ಇನ್ನೂ ನಿಂತಂತೇ ಕಾಣ್ತಿಲ್ಲ.. ಶಿವಮೊಗ್ಗದಲ್ಲಿ ನಮ್ಮ ನಿಮ್ಮೆನ್ನೆಲ್ಲಾ ಕಾಯೋ ಪೊಲೀಸರನ್ನು ಜೀತಕ್ಕೆ ಇರಿಸಿಕೊಳ್ಳಲಾಗಿದೆ.. ಈ ಬಗ್ಗೆ ಸುವರ್ಣನ್ಯೂಸ್ ಬಳಿ ಎಕ್ಸ್'ಕ್ಲೂಸಿವ್ ದೃಶ್ಯ ಸುವರ್ಣನ್ಯೂಸ್'ಗೆ ಲಭ್ಯವಾಗಿದೆ.. ಶಿವಮೊಗ್ಗದ ಮಾಚೇನಹಳ್ಳಿಯ ಕೆಎಸ್'ಆರ್'ಪಿ ಬಟಾಲಿಯನ್'ನಲ್ಲಿ ಈ ಹೀನ ಕೃತ್ಯ ನಡೆದಿದ್ದು ಅಲ್ಲಿನ ಪೊಲೀಸ್ ಪೇದೆಗಳನ್ನು ಕಲ್ಲು ಎತ್ತಿಹಾಕೋಕೆ, ಮಣ್ಣು ಹೊರೋಕೆ ಬಳಸಿಕೊಳ್ಳಲಾಗಿದೆ.. ಕೆಎಸ್'ಆರ್'ಪಿ ಕಮಾಂಡೆಂಟ್ ಈ ರೀತಿ ಪೊಲೀಸ್ ಪೇದೆಗಳಿಗೆ ನಿತ್ಯ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬರ್ತಿದೆ. ಅಲ್ಲದೆ ಕಷ್ಟವನ್ನು ಹೇಳಿಕೊಳ್ಳಲು ಬಂದ ಪೊಲೀಸ್ ಪೇದೆಯೊಬ್ಬನ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ.. ಹಲ್ಲೆಗೆ ಯತ್ನಿಸಿ ಆ ಪೇದೆಯನ್ನು ತಳ್ಳಾಡಿರುವ ಸಿಸಿಟಿವಿ ದೃಶ್ಯಗಳನ್ನು ಸುವರ್ಣನ್ಯೂಸ್'ನಲ್ಲಿ ಪ್ರಸಾರ ಮಾಡಲಾಗಿದೆ. ಆರ್ಡರ್ಲಿ ಪದ್ಧತಿಯನ್ನು ನಿಷೇಧ ಮಾಡಿರುವ ಸರ್ಕಾರಕ್ಕೆ ಇದು ಕಣ್ಣಿಗೆ ಬೀಳಲಿಲ್ವಾ ಅನ್ನೋ ಪ್ರಶ್ನೆ ಇದೀಗ ಕಾಡ್ತಿದೆ. ಇನ್ನು ಕಂಡು ಕೂಡ ಹಿರಿಯ ಅಧಿಕಾರಿಗಳು ಸುಮ್ನೆ ಇದ್ದಾರಾ ಅನ್ನೋ ಪ್ರಶ್ನೆ ಕಾಡ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.