
ಬೆಂಗಳೂರು : ಈತ ಅಂತಿಂಥ ಸರಗಳ್ಳನಲ್ಲ. ಇದುವರೆಗೆ ನೂರಾರು ಬಾರಿ ಸರಗಳ್ಳತನ ಎಸಗಿದ್ದಾನೆ. ಅದೂ ಏಕಾಂಗಿಯಾಗಿ. ಬಂದ ಹಣದಲ್ಲಿ ಐಷಾರಾಮಿ ಜೀವನ ಮಾಡುತ್ತಿದ್ದ. ಕಾರು, ಬೈಕ್‌ಗಳನ್ನು ಹೊಂದಿದ್ದ. ಮನೆಯ ಬಳಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವುದಾಗಿ ಬೋರ್ಡನ್ನೂ ನೇತುಹಾಕಿದ್ದ.
ಬೆಂಗಳೂರು ಪೊಲೀಸರಿಗೆ ತಲೆನೋವಾಗಿದ್ದ ಹಾಗೂ ಪೊಲೀಸರ ವಶದಲ್ಲಿದ್ದಾಗಲೇ ಪರಾರಿಯಾಗಿದ್ದ ಈ ಕುಖ್ಯಾತ ಒಂಟಿ ಸರಗಳ್ಳನ ಮೇಲೆ ಗುಂಡು ಹಾರಿಸಿ ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಈತ ಕುಂಬಳಗೂಡು ಸಮೀಪದ ಕಣಮಿಣಕೆ ಗ್ರಾಮದ ನಿವಾಸಿ ಅಚ್ಯುತಕುಮಾರ್ ಗಣಿ (31 ).
ಘಟನೆಯಲ್ಲಿ ಆರೋಪಿಯಿಂದ ಚಾಕು ಇರಿತಕ್ಕೆ ಒಳಗಾಗಿರುವ ಜ್ಞಾನಭಾರತಿ ಠಾಣೆ ಕಾನ್ಸ್‌ಟೇಬಲ್ ಚಂದ್ರಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡೇಟು ತಿಂದ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು
ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.