ಪಾರ್ಕನಲ್ಲಿ ಕುಳಿತದ್ದೇ ತಪ್ಪಾಯ್ತು..! ಆಮೇಲೆ ಏನಾಯಿತು..?

By Internet DeskFirst Published Oct 5, 2016, 2:54 AM IST
Highlights

ಬಳ್ಳಾರಿ(ಅ.05): ದಕ್ಷಿಣ ಕನ್ನಡ ಜಿಲ್ಲೆಗಳ ಭಾಗದಲ್ಲಿ ಮಾತ್ರ ಪೊಲೀಸ್ ನೈತಿಕಗಿರಿ ಸುದ್ದಿಕೇಳಿ ಬರುತ್ತಿದ್ದವು..  ಇದೀಗ ಗಣಿನಾಡು ಬಳ್ಳಾರಿಯಲ್ಲೂ ಪೊಲೀಸ್ ನೈತಿಕಗಿರಿ ಬೆಳಕಿಗೆ ಬಂದಿದೆ. ಪಾರ್ಕ್‌ನಲ್ಲಿ ಕುಳಿತು ಮಾತನಾಡುತ್ತಿದ್ದ ಒಂದೇ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ಇವರಿಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದ ಯುವಕ ಮತ್ತು ಯುವತಿ  ನಿನ್ನೆ ಬಳ್ಳಾರಿ ನಗರ ರೇಡಿಯೋ ಪಾರ್ಕ್ ಬಳಿ ಇರುವ ಕಿರುಮೃಗಾಲಯದಕ್ಕೆ ಆಗಮಿಸಿ ಜೊತೆಗೆ ಕುಳಿತು ಮಾತನಾಡುತ್ತಿದ್ದರು.

Latest Videos

ಇದೇ ವೇಳೆ ಈ ಪಾರ್ಕ್‌ಗೆ ಬಂದ ಯುವತಿಯ ಸಮುದಾಯದ ಕೆಲ ಯುವಕರ ಗುಂಪು ಇವರನ್ನು ಪ್ರಶ್ನಿಸಿದ್ದಾರೆ. ಹಾಗೂ ಬೇರೆ ಸಮುದಾಯದ ಯುವಕನ ಜೊತೆ ಕುಳಿತುಕೊಳ್ಳಲು ನಿನಗೆ ನಾಚಿಕೆಯಾಗುವುದಿಲ್ಲವಾ ಎಂದು ಇಬ್ಬರ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ. ಇವರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆಯನ್ನೂ ಹಾಕಿದ್ದಾರಂತೆ.

ಇನ್ನೂ ತಮಗಾದ ಅವಮಾನ ಬೇರೆಯವರಿಗಾಗಬಾರದು ಎಂದು ಇವರು ಬಳ್ಳಾರಿಯ ಕೌಲ್ ಬಜಾರ್ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಆದರೆ ಇವರ ದೂರನ್ನ ಸ್ವೀಕರಿಸಿದ ಪೊಲೀಸರು ಕೆಲ ಸಮಯ ಸತಾಯಿಸಿದ್ದಾರೆ. ಬಳಿಕ ಎಸ್ಪಿಗೆ ಕಚೇರಿ ಹೋಗಲು ಮುಂದಾದಾಗ ಇವರ ದೂರನ್ನು ಸ್ವೀಕರಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಕೌಲ್ ಬಜಾರ್ ನಿವಾಸಿ ವಿಖಾರ್ ಅಹ್ಮದ್ ಸೇರಿದಂತೆ ಎಂಟು ಜನ ನಾಪತ್ತೆಯಾಗಿದ್ದಾರೆ.

ಒಟ್ಟಾರೆ ವಯಸ್ಕರಾಗಿರುವ ಯುವಕ-ಯುವತಿ ಸರ್ವಸ್ವತಂತ್ರರಾಗಿ ಸ್ನೇಹ ಬೆಳೆಸುವುದೇ ತಪ್ಪಾ? ಹಾಗೆ ಮಾಡಿದವರ ಮೇಲೆ ಪೊಲೀಸ್ ನೈತಿಕಗಿರಿ ಪ್ರದರ್ಶಿಸೋದು ಎಷ್ಟು ಸರಿ? ಎಂಬು ಎಲ್ಲರ ಪ್ರಶ್ನೆ... ಕೂಡಲೇ ಪೊಲೀಸರು ಆರೋಪಿಗಳನ್ನ ಬಂಧಿಸಿದ ಶಿಕ್ಷೆ ಕೊಡಿಸುತ್ತಾರೆ ಕಾದುನೋಡಬೇಕಿದೆ.

click me!