ಚಿಕ್ಕಮಗಳೂರಿನ ದತ್ತ ಜಯಂತಿ ವೇಳೆ ಲಾಠಿ ಪ್ರಹಾರ

By Suvarna Web DeskFirst Published Dec 3, 2017, 1:53 PM IST
Highlights

ಧ್ವಜ ನೆಡುವ ವಿಚಾರವಾಗಿ ಸ್ಥಳದಲ್ಲಿ ಗಲಾಟೆ ನಡೆದಿದೆ. ಅಲ್ಲದೇ ನಿಷೇಧಿತ ಸ್ಥಳದಲ್ಲಿ ಭಗವಧ್ವಜವನ್ನು ನೆಡಲಾಗಿತ್ತು. ಇದರಿಂದ ಗಲಾಟೆ ನಡೆದಿದ್ದು, ಸ್ಥಳದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.  

ಚಿಕ್ಕಮಗಳೂರು(ಡಿ.3): ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ದತ್ತ ಜಯಂತಿ ಹಿನ್ನೆಲೆ ಇಂದು ದತ್ತ ಪಾದುಕೆ ನಡೆದಿದ್ದು, ಈ ವೇಳೆ ನಡೆದ ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ಇಂದು ದತ್ತ ಜಯಂತಿ ಮುಕ್ತಾಯದ ದಿನವಾಗಿದ್ದು, ಧ್ವಜ ನೆಡುವ ವಿಚಾರವಾಗಿ ಸ್ಥಳದಲ್ಲಿ ಗಲಾಟೆ ನಡೆದಿದೆ. ಅಲ್ಲದೇ ನಿಷೇಧಿತ ಸ್ಥಳದಲ್ಲಿ ಭಗವಧ್ವಜವನ್ನು ನೆಡಲಾಗಿತ್ತು. ಇದರಿಂದ ಗಲಾಟೆ ನಡೆದಿದ್ದು, ಸ್ಥಳದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.  

ಗುಂಪು ಚದುರಿಸುವ  ಸಲುವಾಗಿ ಈ ಕ್ರಮ ಕೈಗೊಂಡಿದ್ದಾರೆ.  ಸದ್ಯ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

 

 

 

click me!