ತಡರಾತ್ರಿವರೆಗೂ ಬಾರ್ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಹಣದ ಬೇಡಿಕೆ ಇಟ್ಟ ಪೊಲೀಸ್ ಅಧಿಕಾರಿ ಅಮಾನತು

Published : Oct 05, 2017, 06:43 PM ISTUpdated : Apr 11, 2018, 12:46 PM IST
ತಡರಾತ್ರಿವರೆಗೂ ಬಾರ್ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಹಣದ ಬೇಡಿಕೆ ಇಟ್ಟ ಪೊಲೀಸ್ ಅಧಿಕಾರಿ ಅಮಾನತು

ಸಾರಾಂಶ

ರಾಮಲಿಂಗಾ ರೆಡ್ಡಿ ಗೃಹ ಇಲಾಖೆಯ ಅಧಿಕಾರ ವಹಿಸಿಕೊಂಡ ಬಳಿಕ ಬೆಂಗಳೂರು ಪೊಲೀಸರ ಸಭೆ ಕರೆದು ಖಡಕ್ ಸೂಚನೆಯನ್ನು ನೀಡಿದ್ದರು.  20 ಅಂಶಗಳ ಸೂಚನೆಯನ್ನು  ಕಡ್ಡಾಯ ಪಾಲನೆ ಮಾಡುವಂತೆ ತಿಳಿಸಿದ್ದರು.  ಆದರೆ ಸೂಚನೆ ಮೀರಿ ಕಾನೂನು ಸುವ್ಯವಸ್ಥೆಯ ಕಾಪಾಡಬೇಕಾದವನೊಬ್ಬ ಹಾದಿ ತಪ್ಪಿದ ಪರಿಣಾಮ ಅಡ್ಡದಾರಿ ಹಿಡಿದು ಬಿಡುಗಾಸಿಗೆ ಕೈಚಾಚಿ ಅಮಾನತ್ತುಗೊಂಡಿದ್ದಾನೆ.

ಬೆಂಗಳೂರು (ಅ.05): ರಾಮಲಿಂಗಾ ರೆಡ್ಡಿ ಗೃಹ ಇಲಾಖೆಯ ಅಧಿಕಾರ ವಹಿಸಿಕೊಂಡ ಬಳಿಕ ಬೆಂಗಳೂರು ಪೊಲೀಸರ ಸಭೆ ಕರೆದು ಖಡಕ್ ಸೂಚನೆಯನ್ನು ನೀಡಿದ್ದರು.  20 ಅಂಶಗಳ ಸೂಚನೆಯನ್ನು  ಕಡ್ಡಾಯ ಪಾಲನೆ ಮಾಡುವಂತೆ ತಿಳಿಸಿದ್ದರು.  ಆದರೆ ಸೂಚನೆ ಮೀರಿ ಕಾನೂನು ಸುವ್ಯವಸ್ಥೆಯ ಕಾಪಾಡಬೇಕಾದವನೊಬ್ಬ ಹಾದಿ ತಪ್ಪಿದ ಪರಿಣಾಮ ಅಡ್ಡದಾರಿ ಹಿಡಿದು ಬಿಡುಗಾಸಿಗೆ ಕೈಚಾಚಿ ಅಮಾನತ್ತುಗೊಂಡಿದ್ದಾನೆ.

ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡ ಕೂಡಲೇ ಬೆಂಗಳೂರಿನ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ಕರೆದಿದ್ದ ರಾಮಲಿಂಗಾರೆಡ್ಡಿ, ಕೆಲವು ಸೂಚನೆಗಳನ್ನ ನೀಡಿದ್ದರು.  ಅದರಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತೇವೆಂದು ಕಾಕಿ ತೊಟ್ಟವರು 20 ಅಂಶಗಳ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದರು. ಅಲ್ಲದೆ, ನಿಯಮ ಮೀರಿ ನಡೆದವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಅದರ ಪರಿಣಾಮವಾಗಿ ಭ್ರಷ್ಟಾಚಾರದಲ್ಲಿ ತೊಡಿಗದ್ದ ಪೊಲೀಸ್ ಇನ್ಸ್​ಪೆಕ್ಟರ್'ನೊಬ್ಬ ಈಗ ಅಮಾನತ್ತಾಗಿದ್ದಾನೆ.

ತಿಲಕ ನಗರ ಠಾಣೆಯ ಇನ್ಸ್​ಪೆಕ್ಟರ್​ ತನ್ವೀರ್​ ಅಮಾನತ್ತಾದ ಅಧಿಕಾರಿ. ತಿಲಕನಗರ ಠಾಣಾ ವ್ಯಾಪ್ತಿಯ ಮೀನಾಕ್ಷಿ ಬಾರ್​ ತಡರಾತ್ರಿವರೆಗೂ ತೆರದಿದ್ದನ್ನು ಪ್ರಶ್ನಿಸಿದ್ದ ಇನ್ಸ್​ಪೆಕ್ಟರ್​ ತನ್ವಿರ್​ ಬಾರ್​ನ ಮಾಲೀಕನನ್ನು ಠಾಣೆಗೆ ಕರೆಸಿದ್ದ.  ಬಳಿಕ ತಡರಾತ್ರಿವರೆಗೂ ಬಾರ್​ ನಡೆಸಿದರ ವಿರುದ್ಧ ಕ್ರಮಕೈಗೊಳ್ಳುವುದರ ಬದಲು ಎರಡು ಲಕ್ಷ ಹಣದ ಬೇಡಿಕೆಯನ್ನಿಟ್ಟಿದ್ದ.  ಅಲ್ಲದೆ, ತಡರಾತ್ರಿಯವರೆಗೂ ಬಾರ್​ ನಡೆಸಲು ಪರ್ಮಿಷನ್​ ನೀಡೊದಾಗಿ ಹೇಳಿದ್ದ.  ಆದರೆ ಈತನ ಮಾತನ್ನ ಕೇಳದ ಬಾರ್ ಮಾಲೀಕ ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯಗೆ ದೂರು ನೀಡಿದ್ದ. ಹೀಗಾಗಿ ವೈನ್ ಶಾಪ್​ವೊಂದರ ವಿಷಯ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರಲಿಲ್ಲ. ಹಾಗೂ ಹಣಕ್ಕೆ ಬೇಡಿಕೆ ಇಟ್ಟ ಆರೋಪದಡಿ ಕರ್ತವ್ಯ ಲೋಪವಾಗಿದೆ ಎಂಬ ಬಗ್ಗೆ ಕೂಲಂಕುಶ ವರದಿ ತಯಾರಿಸಿದ ಡಿಸಿಪಿ ಬೊರಲಿಂಗಯ್ಯ ನೀಡಿದ ವರದಿ ಆಧರಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್​ ಕುಮಾರ್​ ಹಣದ ಬೇಡಿಕೆಯನ್ನಿಟ್ಟಿದ್ದ ಇನ್ಸ್​ಪೆಕ್ಟರ್​ ತನ್ವಿರ್​ ಹಾಗೂ ಆತನಿಗೆ ಸಹಕರಿಸಿದ ಮುಖ್ಯಪೇದೆ ರಾಘವೇಂದ್ರ ಇಬ್ಬರನ್ನು ಅಮಾನತ್ತು ಆದೇಶ ಹೊರಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳ ಬಳಿ, 6 ಹೊಸ ಬಿಎಂಟಿಸಿ ಬಸ್ ತಂಗುದಾಣಗಳ ಸ್ಥಾಪನೆ!
ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!