ಡಿಕೆಶಿಗೆ ಮುಗಿಯದ ಐಟಿ ಬಿಸಿ; ಐಟಿ ಅಧಿಕಾರಿಗಳಿಂದ ಇಂದು ವಿಚಾರಣೆ

Published : Oct 05, 2017, 06:25 PM ISTUpdated : Apr 11, 2018, 12:52 PM IST
ಡಿಕೆಶಿಗೆ ಮುಗಿಯದ ಐಟಿ ಬಿಸಿ; ಐಟಿ ಅಧಿಕಾರಿಗಳಿಂದ ಇಂದು ವಿಚಾರಣೆ

ಸಾರಾಂಶ

ಇಂಧನ ಸಚಿವ ಡಿ ಕೆ ಶಿವಕುಮಾರ್​ ಮನೆ ಮೇಲೆ ಐಟಿ ರೈಡ್​ ಆಗಿ ಎರಡು ತಿಂಗಳುಗಳು ಕಳೆದು ಹೋದರೂ ಸಚಿವರಿಗೆ ಐಟಿ ಬಿಸಿ ಮಾತ್ರ ಇನ್ನೂ ತಪ್ಪಿಲ್ಲ.  ಡಿಕೆಶಿ ಮನೆಯಲ್ಲಿ ಸಿಕ್ಕ ಆಸ್ತಿ ಪಾಸ್ತಿಗಳ ಪರಿಶೀಲನೆ ನಡೆಸಿರೋ ಐಟಿ ಅಧಿಕಾರಿಗಳು ಪ್ರತಿಯೊಂದು ಆದಾಯಕ್ಕೂ  ಲೆಕ್ಕ ನೀಡುವಂತೆ ಕಚೇರಿಗೆ ಕರೆಸಿ ಹೇಳಿದ್ದಾರೆ.   

ಬೆಂಗಳೂರು (ಅ.05): ಇಂಧನ ಸಚಿವ ಡಿ ಕೆ ಶಿವಕುಮಾರ್​ ಮನೆ ಮೇಲೆ ಐಟಿ ರೈಡ್​ ಆಗಿ ಎರಡು ತಿಂಗಳುಗಳು ಕಳೆದು ಹೋದರೂ ಸಚಿವರಿಗೆ ಐಟಿ ಬಿಸಿ ಮಾತ್ರ ಇನ್ನೂ ತಪ್ಪಿಲ್ಲ.  ಡಿಕೆಶಿ ಮನೆಯಲ್ಲಿ ಸಿಕ್ಕ ಆಸ್ತಿ ಪಾಸ್ತಿಗಳ ಪರಿಶೀಲನೆ ನಡೆಸಿರೋ ಐಟಿ ಅಧಿಕಾರಿಗಳು ಪ್ರತಿಯೊಂದು ಆದಾಯಕ್ಕೂ  ಲೆಕ್ಕ ನೀಡುವಂತೆ ಕಚೇರಿಗೆ ಕರೆಸಿ ಹೇಳಿದ್ದಾರೆ.   

ಡಿಕೆಶಿ ಮನೆಯಲ್ಲಿ ಸಿಕ್ಕ ಆಸ್ತಿಪಾಸ್ತಿಗಳ ದಾಖಲೆಗಳು, ಕಾಗದ ಪತ್ರಗಳನ್ನ ಪರಿಶೀಲನೆ ನಡೆಸಿರೋ ಐಟಿ ಆದಿಕಾರಿಗಳು ಇಂಚಿಂಚೂ ಆದಾಯದ ಮೂಲಗಳನ್ನ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಐಟಿ ಆಧಿಕಾರಿಗಳ ತನಿಖೆ ವೇಳೆ ಆದಾಯಕ್ಕೂ  ಹೆಚ್ಚು ಆಸ್ತಿ ಪತ್ತೆಯಾಗಿರುವುದಕ್ಕೆ ಐಟಿ ಅಧಿಕಾರಿಗಳು ದಾಖಲೆಗಳನ್ನ ಕೇಳಿ ಸಚಿವ ಡಿಕೆಶಿಗೆ ಸಮನ್ಸ್​ ನೀಡಿದ್ದರು.  ಐಟಿ ಸಮನ್ಸ್​ಗೆ ನೀಡಿದ ಬೆನ್ನಲ್ಲೇ  ಸಚಿವ ಡಿಕೆ ಶಿವಕುಮಾರ್​ ಕ್ವೀನ್ಸ್​ ರಸ್ತೆಯ ಐಟಿ ಕಚೇರಿಗೆ ದಾಖಲೆಗಳನ್ನ ಸಮೇತ ಆಗಮಿಸಿದರು.

ಇಂದು ಬೆಳಗ್ಗೆ 11.45 ಕ್ಕೆ ಐಟಿ ಕಚೇರಿಗೆ ಆಗಮಿಸಿದ ಡಿಕೆಶಿ ಒಂದಷ್ಟು ಕಡತಗಳನ್ನ ಜೊತೆಯಲ್ಲಿ ತಂದಿದ್ದರು.  ಐಟಿ ಆಧಿಕಾರಿಗಳ ಪರಿಶೀಲನೆಯಲ್ಲಿ ಕಂಡು ಬಂದ ಕೆಲವು ಆಸ್ತಿ ಪತ್ರಗಳು, ಆದಾಯದ ಮೂಲಗಳ ಡಿಕೆಶಿ ತಂದಿದ್ದ ಪತ್ರಗಳೊಂದಿಗೆ ಪರಿಶೀಲನೆ ನಡೆಸಿದರು.  ಸುಮಾರು ಮೂರು ಗಂಟೆಗಳ ಕಾಲ ಐಟಿ ಅಧಿಕಾರಿಗಳು ಡಿ ಕೆ ಶಿವಕುಮಾರ್​ ಅವರು ತಂದಿದ್ದ ದಾಖಲೆಗಳನ್ನ ಪರಿಶೀಲನೆ ನಡೆಸಿದರು.  ನಂತರ ಮಾತಾನಾಡಿದ ಡಿಕೆಶಿ ಐಟಿ ಆದಿಕಾರಿಗಳು ಕೆಲವು ಆಸ್ತಿಗಳಿಗೆ ಸಂಬಂಧಿಸಿದಂತೆ ಸಮನ್ಸ್​ ನೀಡಿದ್ದರು. ಅದರಂತೆ  ಇಂದು ಹಾಜರಾಗಿ ದಾಖಲೆಗಳನ್ನ ನೀಡಿದ್ದೇನೆ ಅಂದರು.

ಅಲ್ಲದೇ ಇನ್ನೂ ಕೆಲವು ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವ ಕಾರ್ಯ ಬಾಕಿಯಿದ್ದು, ಮತ್ತೊಮ್ಮೆ ಬರಲು ಐಟಿ ಆಧಿಕಾರಿಗಳು ನೀಡೋ ಸಾದ್ಯತೆ ಇದೆ. ಸದ್ಯ ಐಟಿ ದಾಳಿ ಮುಗಿದಿದ್ದರೂ  ಅದರ ಬಿಸಿ ಮಾತ್ರ ಇನ್ನೂ ಮಾಸಿಲ್ಲ. ಐಟಿ ಆಧಿಕಾರಿಗಳು ತನಿಖೆ ಹಾಗೂ ಕಡತಗಳ ಪರಿಶೀಲನೆ ಹಿನ್ನೆಲೆಯಲ್ಲಿ ಡಿಕೆಶಿಗೆ ಶಾಕ್​ ಮೇಲೆ ಶಾಕ್​ ನೀಡುತ್ತಿದ್ದು  ಡಿಕೆಶಿಗೆ ತಲೆನೋವಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ಯಾರಂಟಿ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕೇಂದ್ರಕ್ಕಿಂತ ಉತ್ತಮ: ಸಿಎಂ ಸಿದ್ದರಾಮಯ್ಯ
ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ