ಪೊಲೀಸರು ಸ್ವೀಕರಿಸುವ ಲಂಚಕ್ಕೆ ಕಡಿವಾಣ

By Web DeskFirst Published Aug 12, 2018, 10:10 AM IST
Highlights

ಪೊಲೀಸರು ಸ್ವೀಕರಿಸುವ ದಂಡಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದೀಗ ಹೊಸ ಕ್ರಮವೊಂದನ್ನು ಕೈಗೊಳ್ಳಲಾಗಿದೆ. ಪೊಲೀಸರು ತಮ್ಮ ಬಳಿ 200 ರು.ಗಿಂತ ಹೆಚ್ಚಿನ ಹಣ ಇಟ್ಟುಕೊಳ್ಳುವಥಿಲ್ಲ ಎಂದು ಆದೇಶ ನೀಡಲಾಗಿದೆ.

ಶಿಮ್ಲಾ: ಪೊಲೀಸರು ಲಂಚ ಸ್ವೀಕರಿಸುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಅವರು ಜೇಬಿನಲ್ಲಿ 200 ರು.ಗಿಂತ ಹೆಚ್ಚಿನ ಹಣ ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮವನ್ನು ಹಿಮಾಚಲಪ್ರದೇಶದ ಉನಾ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗಳು ಜಾರಿಗೊಳಿಸಿದ್ದಾರೆ.

 ಚೆಕ್‌ ಪಾಯಿಂಟ್‌ಗಳಲ್ಲಿ ವಾಹನ ತಪಾಸಣೆ ಮಾಡುವ ಪೊಲೀಸರು ತಮ್ಮ ಬಳಿ 200 ರು.ಗಿಂತ ಹೆಚ್ಚು ಇಟ್ಟುಕೊಳ್ಳಬಾರದು ಎಂಬ ಆದೇಶ ಹೊರಡಿಸಲಾಗಿದೆ. ಚೆಕ್‌ ಪಾಯಿಂಟ್‌ನಲ್ಲಿರುವ ಪೊಲೀಸರು, ರಾಜ್ಯಕ್ಕೆ ಆಗಮಿಸುವ ಯಾತ್ರಾರ್ಥಿಗಳ ಬಳಿ ಲಂಚ ಸ್ವೀಕರಿಸುತ್ತಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

ಒಂದು ವೇಳೆ ಹೆಚ್ಚಿಗೆ ಹಣವಿದ್ದರೆ, ಕರ್ತವ್ಯಕ್ಕೆ ಹಾಜರಾಗುವಾಗ ತಮ್ಮ ಬಳಿ ಎಷ್ಟುಹಣವಿದೆ ಎಂಬುದನ್ನು ದೈನಂದಿನ ಡೈರಿಯಲ್ಲಿ ದಾಖಲಿಸಿರಬೇಕು.

click me!