ಯುವಕ-ಯುವತಿ ಬಗ್ಗೆ ಶಂಕೆ: ದೂರು

Published : Oct 21, 2017, 06:15 PM ISTUpdated : Apr 11, 2018, 12:47 PM IST
ಯುವಕ-ಯುವತಿ ಬಗ್ಗೆ ಶಂಕೆ: ದೂರು

ಸಾರಾಂಶ

ಸೋಮೇಶ್ವರದ ಸಮುದ್ರ ತೀರದಲ್ಲಿ ಶುಕ್ರವಾರ ವಿಹರಿಸುತ್ತಿದ್ದ ಮೂವರ ಬಗ್ಗೆ ಸಂಶಯಗೊಂಡ ಸ್ಥಳದಲ್ಲಿದ್ದ ಯುವಕರ ತಂಡವೊಂದು ಉಳ್ಳಾಲ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಪೊಲೀಸರು ಅಣ್ಣ-ತಂಗಿಯನ್ನು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ.

ಉಳ್ಳಾಲ: ಸೋಮೇಶ್ವರದ ಸಮುದ್ರ ತೀರದಲ್ಲಿ ಶುಕ್ರವಾರ ವಿಹರಿಸುತ್ತಿದ್ದ ಮೂವರ ಬಗ್ಗೆ ಸಂಶಯಗೊಂಡ ಸ್ಥಳದಲ್ಲಿದ್ದ ಯುವಕರ ತಂಡವೊಂದು ಉಳ್ಳಾಲ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಪೊಲೀಸರು ಅಣ್ಣ-ತಂಗಿಯನ್ನು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ.

ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಮಾಡೂರು ನಿವಾಸಿಗಳಾದ ಯುವಕ ಹಾಗೂ ಆತನ ದೊಡ್ಡಮ್ಮನ ಮಗಳು, ಯುವಕನ ಸ್ನೇಹಿತನೋರ್ವ ಸೋಮೇಶ್ವರ ಸಮುದ್ರದ ತೀರದಲ್ಲಿ ವಿಹರಿಸುತ್ತಿದ್ದರು. ಇದನ್ನೇ ಗಮನಿಸಿದ ಸ್ಥಳದಲ್ಲಿದ್ದ ಯುವಕರ ತಂಡವೊಂದು ಈ ಮೂವರ ಬಗ್ಗೆ ಶಂಕೆ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮೂವರು ಜೊತೆಗಿರುವ ಚಿತ್ರ ಹಾಗೂ ವಿಡಿಯೋಗಳನ್ನು ಹರಿಯಬಿಟ್ಟಿದೆ. ಬಳಿಕ ಉಳ್ಳಾಲ ಪೊಲೀಸರು, ಪೊಲೀಸ್ ಕಂಟ್ರೋಲ್ ರೂಂಗೂ ಮಾಹಿತಿ ನೀಡಿದ್ದಾರೆ.  ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೋಲಿಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡರು. ಇವರ ಜೊತೆಗಿದ್ದ ಇನ್ನೊಬ್ಬ ಯುವಕ ಪೊಲೀಸರನ್ನು ಕಂಡು ಹೆದರಿ ಪರಾರಿಯಾಗಿದ್ದಾನೆ.

ಉಳ್ಳಾಲ ಠಾಣೆಯಲ್ಲಿ ಈ ಕುರಿತು ವಿಚಾರಣೆ ನಡೆದು ಇಬ್ಬರೂ ಹತ್ತಿರದ ಸಂಬಂಧಿಕರಾಗಿರುವುದು ದೃಢಪಟ್ಟಿದೆ. ಯುವತಿ ಯುವಕನ ದೊಡ್ಡಮ್ಮನ ಮಗಳಾಗಿದ್ದಾಳೆಂದು ತಿಳಿದುಬಂದಿದೆ ಎಂದು ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಗೋಪಿಕೃಷ್ಣ ಪತ್ರಿಕೆಗೆ ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ