ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ; ಕಳ್ಳರನ್ನು ಹಿಡಿಯಬೇಕಿದ್ದ ಪೊಲೀಸರಿಂದಲೇ ದರೋಡೆ!

Published : Jan 30, 2018, 09:04 AM ISTUpdated : Apr 11, 2018, 01:00 PM IST
ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ; ಕಳ್ಳರನ್ನು ಹಿಡಿಯಬೇಕಿದ್ದ ಪೊಲೀಸರಿಂದಲೇ ದರೋಡೆ!

ಸಾರಾಂಶ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ.  ಕಳ್ಳಕಾಕರನ್ನು ಹಿಡಿದು ಜೈಲಿಗಟ್ಟಬೇಕಿದ್ದ ಪೊಲೀಸ್​ ಪೇದೆಯೇ ದರೋಡೆಗೆ ಇಳಿದಿದ್ದಾರೆ. ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದ ಪೇದೆ ಈಗ ಅಂದರ್​ ಆಗಿದ್ದಾನೆ.

ಬೆಂಗಳೂರು (ಜ.30): ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ.  ಕಳ್ಳಕಾಕರನ್ನು ಹಿಡಿದು ಜೈಲಿಗಟ್ಟಬೇಕಿದ್ದ ಪೊಲೀಸ್​ ಪೇದೆಯೇ ದರೋಡೆಗೆ ಇಳಿದಿದ್ದಾರೆ. ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದ ಪೇದೆ ಈಗ ಅಂದರ್​ ಆಗಿದ್ದಾನೆ.

ಜನವರಿ 20 ರಂದು ಎಂ,ಎಸ್ ರಾಮಯ್ಯದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ಅಮಿತ್ ಹಾಗೂ ಸ್ನೇಹಿತರ ಪಿಜಿಗೆ ನುಗ್ಗಿ ರಾಬರಿ ಮಾಡಿದ್ದಾನೆ. ಸ್ಟೇಟ್ ಇಂಟಲಿಜೆನ್ಸ್'ನಲ್ಲಿ ಹೆಡ್'ಕಾನ್ಸ್'ಸ್ಟೇಬಲ್  ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಬು, ವಿದ್ಯಾರ್ಥಿಗಳ ಪಿಜಿಗೆ ನುಗ್ಗಿ ಗಾಂಜಾ ಪೊಟ್ಟಣ ಇರಿಸಿದ್ದಾನೆ. 50 ಸಾವಿರ ಕೊಡಬೇಕು, ಇಲ್ಲಾಂದ್ರೆ ಎಫ್'ಐಆರ್ ಹಾಕಿ ಒಳಗಾಗ್ತಿನಿ ಎಂದು ಧಮ್ಕಿಯಾಕಿದ್ದಾನೆ.

ಇದರಿಂದ ಬೆದರಿದ ವಿದ್ಯಾರ್ಥಿ ಅಮಿತ್ ತನ್ನ ಬಳಿಯಿದ್ದ 15 ಸಾವಿರ ಕೊಟ್ಟಿದ್ದಾನೆ. ನಂತರ ಮಲ್ಲೇಶ್ವರಂನಲ್ಲಿರುವ ತನ್ನ ಸ್ನೇಹಿತನ ಬಳಿ ಹಣವಿದೆ ಆತನಿಂದ ನಿಮಗೆ ಕೊಡಿಸುತ್ತೇನೆಂದು ಕರೆದುಕೊಂಡು ಹೋಗಿದ್ದಾನೆ. ಆಟೋದಲ್ಲಿ ಹೋಗುವಾಗ ತನ್ನ ಸ್ನೇಹಿತನಿಗೆ ನಡೆದ ಘಟನೆ ಬಗ್ಗೆ ಮೆಸೇಜ್ ಹಾಕಿದ್ದ. ಇದನ್ನ ಗಮನಿಸಿದ ಪೇದೆ ಬಾಬು ಬಿಎಲ್ ರಸ್ತೆಯ ಅಯ್ಯಪ್ಪಸ್ವಾಮಿ ಟೆಂಪಲ್ ಬಳಿ ಹಲ್ಲೆ ನಡೆಸಿದ್ದಾನೆ. ಅಮಿತ್ ಕೂಗುತ್ತಿದ್ದಂತೆ ನೈಟ್ ಬೀಟಲಿದ್ದ ಪೇದೆಗಳು ಬಂದು ತಪಾಸಣೆ ನಡೆಸಿದಾಗ ವಿಷಯ ಗೊತ್ತಾಗಿದೆ. ಪೇದೆ  ಬಾಬು ಸೇರಿದಂತೆ 5 ಮಂದಿಯನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯತ್ನಾಳ್ ಭಾಷಣಕ್ಕೆ ಟಾಂಗ್ ಕೊಡಲು ಹೋಗಿ ಯಡವಟ್ಟು ಮಾಡಿಕೊಂಡ ಸಚಿವ ಸಂತೋಷ್ ಲಾಡ್!
ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ