ರೌಡಿ ನಾಗನ ವಿರುದ್ಧ ಎಫ್'ಐ'ಆರ್

Published : Apr 15, 2017, 12:54 AM ISTUpdated : Apr 11, 2018, 12:47 PM IST
ರೌಡಿ ನಾಗನ ವಿರುದ್ಧ ಎಫ್'ಐ'ಆರ್

ಸಾರಾಂಶ

ನಾಗನ ಸಹಚರರಾದ ಸರವಣ, ಪ್ರವೀಣ್ ಎಂಬುವವರು ಉಮೇಶ್, ಕಿಶೋರ್ ಎಂಬುವವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು(ಏ.15): ರೌಡಿ ನಾಗನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಆತನ ವಿರುದ್ಧ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್'ಐಆರ್ ದಾಖಲಿಸಿದ್ದಾರೆ.

ನಾಗನ ಸಹಚರರಾದ ಸರವಣ, ಪ್ರವೀಣ್ ಎಂಬುವವರು ಉಮೇಶ್, ಕಿಶೋರ್ ಎಂಬುವವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸರವಣ ಹಾಗೂ ಪ್ರವೀಣ್ ಎಂಬುವವರು ಮಾರ್ಚ್ 18 ಸಂಜೆ 4 ಗಂಟೆಗೆ KA 41- 9975 ನಂಬರಿನ ​ಕಾರಿನಲ್ಲಿ ಬಂದು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ 50 ಲಕ್ಷ ರೂ. ಹಣ, ಮೊಬೈಲ್ ಹಾಗೂ ಡೆಬಿಟ್ ಕಾರ್ಡ್'ಗಳನ್ನು ಕಸಿದುಕೊಂಡು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಎಫ್'ಐ'ಆರ್'ನಲ್ಲಿ ದಾಖಲಾಗಿದೆ.

ಬೆಂಗಳೂರಿನಲ್ಲಿರುವ ರೌಡಿಶೀಟರ್‌, ಮಾಜಿ ಪಾಲಿಕೆ ಸದಸ್ಯ ನಾಗರಾಜ ಅಲಿಯಾಸ್‌ ನಾಗನ ಮನೆ ಮೇಲೆ ಬೆಂಗಳೂರು ಪೂರ್ವ ವಿಭಾಗದ ಹೇಮಂತ್‌ ನಿಂಬಾಳ್ಕರ್‌ ನೇತೃತ್ವದ ತಂಡ ದಾಳಿ ನಡೆಸಿದ್ದು, ಮನೆಯ ಬೆಡ್‌ರೂಂನಲ್ಲಿ ಇಟ್ಟಿಗೆಯ ಮಂಚ ನಿರ್ಮಿಸಿ ಅದರಲ್ಲಿ ಅವಿತಿಟ್ಟಿದ್ದ . 14.80 ಕೋಟಿ ನಗದು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದೆ.
ಆದರೆ , ಖಾಕಿಯ ಪಡೆಯ ದಾಳಿಯ ಮುನ್ಸೂಚನೆಯ ಬಗ್ಗೆ ಮಾಹಿತಿ ಅರಿತಿದ್ದ ಆರೋಪಿ ನಾಗರಾಜ ರಾತ್ರೋರಾತ್ರಿ ಮನೆಯಿಂದ ಪರಾರಿ ಯಾಗಿದ್ದು, ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ನಿಂಬಾಳ್ಕರ್‌ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿಕ್ಕಮಗಳೂರು ಮುಳ್ಳಯ್ಯನಗಿರಿ ರಸ್ತೆಯಲ್ಲಿ ಪ್ರವಾಸಿ ಜೀಪ್ ಪಲ್ಟಿ; ಕೇರಳದ ಆರು ಶಾಲಾ ಮಕ್ಕಳಿಗೆ ಗಾಯ
ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಬಾರಿ ದುರಂತ, ಉಳಿತು ಪ್ರಯಾಣಿಕರ ಪ್ರಾಣ