ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರೆಸ್ಟ್..!

By Web DeskFirst Published Nov 17, 2018, 9:22 PM IST
Highlights

ಶಾಂತವಾಗಿದ್ದ ದೇವರನಾಡು ಕೇರಳದಲ್ಲಿ ಶಬರಿಮಲೆಯಿಂದ ಮತ್ತೆ ಇಂದು [ಶನಿವಾರ] ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನ ಬಂಧಿಸಿದ್ದಾರೆ.

ತಿರುವನಂತಪುರ, [ನ.17]: ಶಾಂತವಾಗಿದ್ದ ದೇವರನಾಡು ಕೇರಳದಲ್ಲಿ ಶಬರಿಮಲೆಯಿಂದ ಮತ್ತೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.  

 ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂ ಕೋರ್ಟ್​​ ತೀರ್ಪು ನೀಡಿದ ಬಳಿಕ ನಿನ್ನೆ (ಶನಿವಾರ] 3ನೇ ಬಾರಿಗೆ ಅಯ್ಯಪ್ಪ ದೇವಾಲಯದ ಬಾಗಿಲು ತೆರೆದಿದೆ. 

ಇದರ ಮಧ್ಯೆ ಇಂದು [ಶನಿವಾರ] ಕೇರಳದಾದ್ಯಂತ ಬಂದ್​​ಗೆ ಕರೆ ನೀಡಲಾಗಿದ್ದು, ಈ ವೇಳೆ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಶಬರಿಮಲೆ: ತೃಪ್ತಿ ದೇಸಾಯಿ v/s ಹಿಂದೂ ಸಂಘಟನೆಗಳು; ವಾದಕ್ಕೆ ವಾದ; ಹಠಕ್ಕೆ ಹಠ

 ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದಾಗ ಮುಜಾಗೃತ ಕ್ರಮವಾಗಿ ಶಬರಿಮಲೆ ಸಮೀಪದ ನಿಲಕಲ್ ಬೆಸ್ ಕ್ಯಾಪ್‌ನಲ್ಲಿ ಸುರೇಂದ್ರನ್ ಅವರನ್ನ ಅರೆಸ್ಟ್ ಮಾಡಲಾಗಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ರಿಂದ ಶಬರಿಮಲೆ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಲಾಗಿತ್ತು. ಇದನ್ನ  ಉಲ್ಲಂಘಿಸಿ ಆಗಮಿಸಿದ ಹಿಂದೂ ಐಕ್ಯವೇದಿಕೆ ಸಂಘಟನೆ ನಾಯಕಿ  ಶಶಿಕಲಾ ಅವರನ್ನು ಮರಕ್ಕೊಟ್ಟಂ ಬಳಿ ಪೊಲೀಸರು ವಶಕ್ಕೆ ಪಡೆದರು.. 

ಶಶಿಕಲಾ ಬಂಧನ ವಿರೋಧಿಸಿ ವಿವಿಧ ಹಿಂದೂ ಪರ ಸಂಘಟನೆಗಳು ಕೇರಳ ಬಂದ್ಗೆ ಕರೆ ನೀಡಿದ್ವು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆಯಿಂದ ಶಬರಿಮಲೆ ಸುತ್ತಮುತ್ತ ಖಾಕಿ ಸರ್ಪಗಾವಲು ಹಾಕಲಾಗಿತ್ತು. 

 ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪೊಲೀಸ್ ಠಾಣೆಗೆ ಹಿಂದೂ ಕಾರ್ಯಕರ್ತರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ್ರೆ, ಬಂಧನಕೊಳ್ಳಗಾದ ಶಶಿಕಲಾ ಪೊಲೀಸ್ ಠಾಣೆಯಲ್ಲೇ ಉಪವಾಸ ಸತ್ಯಾಗ್ರಹ ನಡೆಸಿದ್ರು. 

ಇಷ್ಟೆಲ್ಲಾ ರಾದ್ಧಾಂತಗಳು ಮುಗಿದ್ಮೇಲೆ ಶಶಿಕಲಾಗೆ ಜಾಮೀನು ಮಂಜೂರಾಗಿದೆ. ಇದೀಗ ಕೇರಳದ ಬಿಜೆಪಿ ಪ್ರಧಾನ ಕಾಯರ್ಯದರ್ಶಿ ಕೆ. ಸುರೇಂದ್ರನ್ ಅವರನ್ನ ಬಂಧಿಸಲಾಗಿದೆ.

click me!