
ನವದೆಹಲಿ(ನ.13): ಆರ್'ಎಸ್'ಎಸ್ ಕಾರ್ಯಕರ್ತರ ಹತ್ಯೆಗೆ ಪಾಕ್ ಬೇಹುಗಾರಿಕಾ ಪಡೆ ಐಎಸ್ಐ ಇಟಲಿ, ಕೆನಡಾ, ಇಂಗ್ಲೆಂಡ್ನಲ್ಲಿರೋ ಐಎಸ್ಐ ಏಜೆಂಟರ ಮೂಲಕ ಸಂಚು ನಡೆಸುತ್ತಿರುವ ಸ್ಫೋಟಕ ಮಾಹಿತಿಯನ್ನು ಪಂಜಾಬ್ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಆರ್'ಎಸ್'ಎಸ್ ಕಾರ್ಯಕರ್ತರ ಹತ್ಯೆಗೆ ಖಲಿಸ್ತಾನ್ ಬೆಂಬಲಿಗರನ್ನು ಬಳಸಲಾಗುತ್ತಿದ್ದು, ಜಗದೀಶ್ ಕುಮಾರ್ ಕೊಲೆ ಪ್ರಕರಣ ತನಿಖೆ ವೇಳೆ ಸತ್ಯ ಬಯಲಾಗಿದೆ. ಒಂದು ಕೊಲೆ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ 6 ಕೊಲೆಗಳ ರಹಸ್ಯ ಬಯಲಾಗಿದೆ. ತನಿಖೆಯ ಸಂದರ್ಭದಲ್ಲಿ ಆರ್'ಎಸ್'ಎಸ್, ಶಿವಸೇನೆ, ಹಿಂದೂ ತಖ್ತ್ ಸಂಘಟನೆಗಳ ಮುಖಂಡರ ಕೊಲೆ ರಹಸ್ಯಗಳು ಕೂಡ ಬಯಲಾಗಿದೆ. ಪಂಜಾಬ್ ಪೊಲೀಸರು ಆರ್'ಎಸ್'ಎಸ್ ಮುಖಂಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ಮಿ ಸಿಂಗ್, ಜಗ್ತಾರ್ ಸಿಂಗ್, ಜೊಹಾಲ್, ಧರ್ಮೇಂದರ್ ಅಲಿಯಾಸ್ ಗುಗ್ಗಿ ಎಂಬುವರರನ್ನು ಬಂಧಿಸಿದ್ದರು.
ಈ ಸಂದರ್ಭದಲ್ಲಿ ಪಾಕ್ ಹಣ, ಐಎಸ್ಐ ಕೈವಾಡ, ಇಟಲಿ, ಕೆನಡಾ, ಇಂಗ್ಲೆಂಡ್ ಲಿಂಕ್ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಖಲಿಸ್ತಾನ್ ಬೆಂಬಲಿಗರಿಂದ ಹಿಂದೂ ಮುಖಂಡರ ಹತ್ಯೆ ಮಾಡಿಸಿ ಕೋಮುದಳ್ಳುರಿ ಸೃಷ್ಟಿಸುವುದು ಯೋಜನೆಯ ಉದ್ದೇಶವಾಗಿದೆ. ಪಂಜಾಬ್ನಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರ ಹತ್ಯೆಯಲ್ಲಿ ಐಎಸ್ಐ ಕೈವಾಡವಿರುವುದರ ಬಗ್ಗೆ ಸ್ವತಃ ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಒಪ್ಪಿಕೊಂಡಿದ್ದರು.ಪ್ರಮುಖ ಆರೋಪಿ ಜಿಮ್ಮಿ ಸಿಂಗ್ ಮೂಲತಃ ಜಮ್ಮು ನಿವಾಸಿ ಹಲವು ವರ್ಷಗಳ ಕಾಲ ಇಂಗ್ಲೆಂಡ್ನಲ್ಲಿದ್ದು ಇತ್ತೀಚೆಗಷ್ಟೆ ಭಾರತಕ್ಕೆ ಮರಳಿದ್ದ.
ಇಂಗ್ಲೆಂಡ್ನಲ್ಲಿದ್ದಾಗಲೇ ಐಎಸ್ಐ ಏಜೆಂಟರ ಸಂಪರ್ಕಕ್ಕೆ ಬಂದಿದ್ದ ಜಿಮ್ಮಿ ಸಿಂಗ್. ಅದೇ ರೀತಿ 2ನೇ ಆರೋಪಿ ಜಗ್ತಾರ್ ಸಿಂಗ್ ಇಂಗ್ಲೆಂಡ್ ನಾಗರಿಕನಾಗಿದ್ದು ಪಂಜಾಬಿ ಕನ್ಯೆಯನ್ನ ಮದುವೆಯಾಗಿದ್ದ. 3ನೇ ಆರೋಪಿ ಧರ್ಮೇಂದರ್ ಅಲಿಯಾಸ್ ಜಗ್ಗಿ ಸ್ಥಳೀಯ ರೌಡಿಶೀಟರ್. ಇವರೆಲ್ಲರಿಗೂ ಆರ್'ಎಸ್'ಎಸ್ ಮುಖಂಡರ ಹತ್ಯೆಗೆ ವಿದೇಶದಿಂದ ಹಣ, ರಹಸ್ಯ ಸ್ಥಳದಲ್ಲಿ ತರಬೇತಿ ನೀಡಲಾಗುತ್ತದೆ. ಗೂಂಡಾಗಳು, ಖಲಿಸ್ತಾನ್ ಪರ ಒಲವು ಹೊಂದಿರುವ ಯುವಕರು ಆರ್'ಎಸ್'ಎಸ್ ಅನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಪಂಜಾಬ್ನಲ್ಲಿ ಭಯೋತ್ಪಾದನೆ ಹುಟ್ಟುಹಾಕಿ ಭಾರತವನ್ನು ಅಭದ್ರಗೊಳಿಸಲು ಪಾಕ್ ಷಡ್ಯಂತ್ರ ರೂಪಿಸುತ್ತಿದೆ.
ಪಾಕ್'ನಿಂದ ಇಸ್ರೇಲ್ ರಣತಂತ್ರ ?
ಇಸ್ರೇಲ್ ಬೇಹುಗಾರಿಕಾ ಪಡೆ ಮೊಸಾದ್ನಂತೆಯೇ ಐಎಸ್ಐ ಕೆಲಸ ಮಾಡುತ್ತಿದ್ದು, ಮಿಲಿಟರಿ ದಾಳಿಗಳ ಬದಲು ವಿರೋಧಿಗಳ ಕಗ್ಗೊಲೆ ಮಾಡುವ ರಣತಂತ್ರ ರೂಪಿಸುತ್ತಿದೆ.ಸಿಬಿಐ-ಎನ್ಐಎಗೆ ಪಂಜಾಬ್ ಪೊಲೀಸರು ಕೊಟ್ಟ ವರದಿಯಲ್ಲಿ ಈ ಬೆಚ್ಚಿಬೀಳಿಸುವ ಅಂಶ ಬಯಲಾಗಿದೆ. ಪ್ಯಾಲಸ್ತೀನ್ ಹೋರಾಟಗಾರರ ಹತ್ಯೆ ಮೂಲಕ ಶತ್ರುವಿನ ಬಲ ಕುಗ್ಗಿಸುವ ತಂತ್ರವನ್ನು ಇಸ್ರೇಲ್ ಮಾಡುತ್ತಿತ್ತು. ವಿದೇಶಗಳಲ್ಲಿ ದಾಳಿಯ ಸಂಚು, ಆಯುಧ ತರಬೇತಿ, ಹಣಕಾಸು ವ್ಯವಸ್ಥೆ ಇದು ಇಸ್ರೇಲ್'ನ ತಂತ್ರವಾಗಿದೆ. ಇದೇ ಮಾದರಿ ಅನುಸರಿಸಿ ಭಾರತದಲ್ಲಿ ಆರ್'ಎಸ್'ಎಸ್ ಮುಖಂಡರ ಹತ್ಯೆಗೆ ಪಾಕ್ ಸಂಚು ರೂಪಿಸುತ್ತಿದೆ.ಇದೇ ಮಾದರಿಯ ಕೊಲೆಗಳು ದೇಶಾದ್ಯಂತ ನಡೆಯುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.