ಭಾರತದಲ್ಲಿ ಹೆಚ್ಚುತಿದೆ ಹುಲಿ ಬೇಟೆ: ಬೆಚ್ಚಿಬೀಳಿಸುತ್ತದೆ ಈ ವರದಿ

By Suvarna Web DeskFirst Published Nov 7, 2016, 10:50 AM IST
Highlights

ಇತ್ತೀಚೆಗೆ ರಾಷ್ಟ್ರೀಯ ಹುಲಿ ರಕ್ಷಣಾ ಪ್ರಾಧಿಕಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, 2016ರ ಜನವರಿಯಿಂದ ಅಕ್ಟೋಬರ್ ತಿಂಗಳ ನಡುವೆ 76 ಹುಲಿಗಳನ್ನು ಹತ್ಯೆ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ನವದೆಹಲಿ(ನ.07): ಹುಲಿ ಭಾರತದ ರಾಷ್ಟ್ರಪ್ರಾಣಿ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚಿನ ದಿನಗಳಲ್ಲಿ ಅಕ್ರಮ ಕಳ್ಳಬೇಟೆಗಾರರ ಹಾವಳಿಯಿಂದ ಹುಲಿಗಳ ಸಂತತಿ ಮೇಲೆ ಕರಾಳ ಪರಿಣಾಮ ಬೀರಿದೆ.

ಇತ್ತೀಚೆಗೆ ರಾಷ್ಟ್ರೀಯ ಹುಲಿ ರಕ್ಷಣಾ ಪ್ರಾಧಿಕಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, 2016ರ ಜನವರಿಯಿಂದ ಅಕ್ಟೋಬರ್ ತಿಂಗಳ ನಡುವೆ 76 ಹುಲಿಗಳನ್ನು ಹತ್ಯೆ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಹುಲಿಗಳನ್ನು ಹತ್ಯೆ ಮಾಡಲಾಗಿದ್ದರೆ, ಅತಿಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂದೇ ಗುರುತಿಸಿಕೊಂಡಿರುವ ಕರ್ನಾಟಕದಲ್ಲೂ ವ್ಯಾಘ್ರಗಳ ಬೇಟೆ ಜೋರಾಗಿದೆ. ಪ್ರಸಕ್ತ ವರ್ಷವೊಂದರಲ್ಲೇ ಕರ್ನಾಟಕದಲ್ಲಿ 13 ಹುಲಿಗಳನ್ನು ಹತ್ಯೆ ಮಾಡಲಾಗಿದ್ದು, ಎರಡನೇ ಸ್ಥಾನದಲ್ಲಿದೆ.

ಕಳೆದ ವರ್ಷ 69 ಹುಲಿಗಳನ್ನು ಹತ್ಯೆಯಾಗಿದ್ದವು. ವರ್ಷದಿಂದ ವರ್ಷಕ್ಕೆ ಹುಲಿಗಳ ಬೇಟೆ ಜಾಸ್ತಿಯಾಗಿದ್ದು

ಹುಲಿ ಸಂರಕ್ಷಣಾಕಾರರು ಬೇಟೆಗಾರರ ವಿರುದ್ಧ ದ್ವನಿಯೆತ್ತಿದ್ದು, ಇದು ಇಲಾಖೆಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಈ ವರ್ಷದಲ್ಲೇ ಇಲ್ಲಿಯವರೆಗೆ 20 ಆರೋಪಿಗಳನ್ನು ಬಂದಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇನ್ನು ಮುಂದಾದರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಹುಲಿ ಸಂರಕ್ಷಣೆಯತ್ತ ಕಾರ್ಯಪ್ರೌವೃತ್ತರಾಗಬೇಕಿದೆ.

click me!