ಪಾಕ್ ಸೈನಿಕರ ಹತ್ಯೆಗೆ ಭಾರತಕ್ಕೆ ಎಚ್ಚರಿಕೆ ನೀಡಿದ ನವಾಜ್ ಷರೀಫ್

By Suvarna Web DeskFirst Published Nov 14, 2016, 5:09 PM IST
Highlights

ವಿಶೇಷವೆಂದರೆ, ಪಾಕಿಸ್ತಾನ ಇದೇ ಮೊದಲ ಬಾರಿಗೆ ಭಾರತದ ದಾಳಿಯನ್ನು ಒಪ್ಪಿಕೊಂಡಿದೆ. ಸರ್ಜಿಕಲ್ ಸ್ಟ್ರೈಕ್ ನಂತರ, ಪಾಕಿಸ್ತಾನ ಸೈನಿಕರು 280ಕ್ಕೂ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದ್ದರು.

ನವದೆಹಲಿ(ನ.14): ಭಾರತದ ಸೈನಿಕರು ಇಂದು ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕ್ ಸೈನಿಕರ ಕಳೆದ ರಾತ್ರಿ ನಮ್ಮ ಯೋಧರು  ದಾಳಿ ನಡೆಸಿ ಅಲ್ಲಿನ 7 ಸೈನಿಕರನ್ನು ಕೊಂದಿದ್ದಾರೆ. ಇದಕ್ಕೆ ವ್ಯಾಘ್ರಗೊಂಡಿರುವ ಅಲ್ಲಿನ ಸರ್ಕಾರ ಭಾರತಕ್ಕೆ ಎಚ್ಚರಿಕೆ ನೀಡಿದೆ.   

ತಮ್ಮ ದೇಶದ  ಸೈನಿಕರ ಹತ್ಯೆಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ' ಭಾರತ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದೆ. ನಮ್ಮ ಸೈನಿಕರ ಮೇಲೆ ಅಪ್ರಚೋದಿತ ದಾಳಿ ನಡೆಸಿ  7 ಸೈನಿಕರನ್ನು ಕೊಂದಿದೆ. ನಾವು ಭಾರತಕ್ಕೆ ಪ್ರತ್ಯುತ್ತರ ಕೊಡಲು ಸಿದ್ದರಿದ್ದೇವೆ. ಶೀಘ್ರದಲ್ಲಿಯೇ ನಾವು ಮಾಡಿ ತೀರಿಸುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶೇಷವೆಂದರೆ, ಪಾಕಿಸ್ತಾನ ಇದೇ ಮೊದಲ ಬಾರಿಗೆ ಭಾರತದ ದಾಳಿಯನ್ನು ಒಪ್ಪಿಕೊಂಡಿದೆ. ಸರ್ಜಿಕಲ್ ಸ್ಟ್ರೈಕ್ ನಂತರ, ಪಾಕಿಸ್ತಾನ ಸೈನಿಕರು 280ಕ್ಕೂ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದ್ದರು. ಪಾಕಿಸ್ತಾನ ಸೈನಿಕರನ್ನು ಛೂ ಬಿಟ್ಟಿದ್ದಕ್ಕಿಂತಲೂ, ಉಗ್ರರನ್ನು ನುಗ್ಗಿಸಿದ್ದೇ ಹೆಚ್ಚು. ಹೀಗೆ ಉಗ್ರರನ್ನು ಭಾರತಕ್ಕೆ ನುಗ್ಗಿಸುವ ಸಂದರ್ಭದಲ್ಲಿ, ನಡೆದ ದಾಳಿಯಲ್ಲಿ 7 ಪಾಕ್ ಸೈನಿಕರನ್ನು ಭಾರತೀಯ ಯೋಧರು ಹೊಡೆದು ಹಾಕಿದ್ದಾರೆ.

ಭಾರತವೇ ಎಲ್​ಒಸಿಯಲ್ಲಿ ನಿಯಮ ಉಲ್ಲಂಘಿಸುತ್ತಿದೆ ಎಂದು ದೂರಿರುವ ಪಾಕಿಸ್ತಾನ, ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ಕೊಟ್ಟಿದೆ. ಇತ್ತ ಕಾಶ್ಮೀರಕ್ಕೆ ಉಗ್ರರನ್ನು ಕಳಿಸುವ ಸಂಚನ್ನೇನೂ ಪಾಕಿಸ್ತಾನ ಬಿಟ್ಟಿಲ್ಲ. ಇಂದು ಮತ್ತೊಬ್ಬ ಉಗ್ರರನ್ನು ಕೊಲ್ಲಲಾಗಿದೆ. ಇದೆಲ್ಲದಕ್ಕಿಂತಲೂ ಅಚ್ಚರಿಯೆಂದರೆ, 500, 1000 ರೂ. ನಿಷೇಧಿಸಿದ ನಂತರ, ಕಾಶ್ಮೀರದಲ್ಲಿ ಕಲ್ಲು ತೂರಾಟ, ಶಾಲೆಗಳ ಎದುರು ನಡೆಯುತ್ತಿದ್ದ ದೊಂಬಿಗಳು ಇದ್ದಕ್ಕಿದ್ದಂತೆ ಸ್ತಬ್ಧವಾಗಿ ಹೋಗಿವೆ.

click me!