
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರುವಾಂಡಾಕ್ಕೆ ಭೇಟಿ ನೀಡಿದ ವೇಳೆ 200 ಸ್ಥಳೀಯ ಹಸುಗಳನ್ನು ಅಧ್ಯಕ್ಷ ಪಾಲ್ ಕಾಗೇಮ್ ಅವರಿಗೆ ಉಡುಗೊರೆ ನೀಡಲಿದ್ದಾರೆ. ಮೋದಿ ಅವರು ‘ರವೇರು’ ಎಂಬ ಮಾದರಿ ಗ್ರಾಮಕ್ಕೆ ಭೇಟಿ ನೀಡಲಿದ್ದು, ಒಂದು ಬಡ ಕುಟುಂಬಕ್ಕೆ ಒಂದು ಹಸು ನೀಡುವ ಮಹತ್ವಾಕಾಂಕ್ಷಿ‘ಗಿರಿಂಕಾ’ ಯೋಜನೆಗೆ ಭಾರತದ ಕೊಡುಗೆಯಾಗಿ 200 ಹಸುಗಳನ್ನು ಕೊಡುಗೆ ನೀಡಲಿದ್ದಾರೆ.
ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ಉದ್ದೇಶದಿಂದ ಸ್ಥಳೀಯ ಹಸುಗಳನ್ನೇ ಉಡುಗೊರೆಯಾಗಿ ನೀಡಲಾಗುತ್ತಿದೆ. ಮೋದಿ ಅವರು ಕಿಗಾಲಿ ಜೆನೋಸೈಡ್ ಸ್ಮಾರಕಕ್ಕೂ ಭೇಟಿ ನೀಡಲಿದ್ದು, 1994 ರಲ್ಲಿ ನರಮೇಧದ ವೇಳೆ ಭಾರತೀಯರನ್ನು ರಕ್ಷಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೋದಿ, ರುವಾಂಡಾಕ್ಕೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿಯೂ ಹೌದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.