
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದಿನದಲ್ಲಿ ಹಲವು ಬಾರಿ ಬಟ್ಟೆ ಬದಲಾಯಿಸುವ ಬಗ್ಗೆ ಸಾಕಷ್ಟು ಮಂದಿ ಕುಹಕವಾಡು ವುದಿದೆ. ಇಷ್ಟೊಂದು ಬಟ್ಟೆಗಳಿಗೆ ಸರ್ಕಾರದ ಹಣವೆಚ್ಚವಾಗುತ್ತಿದೆ ಎಂಬರ್ಥದ ಮಾತುಗಳೂ ಕೇಳಿಬರುತ್ತಿರುತ್ತವೆ.
ಆದರೆ ಇತ್ತೀಚಿನ ಆರ್‌ಟಿಐ ಅರ್ಜಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಧಾನಿ ಮೋದಿಯವರ ಬಟ್ಟೆಗಳಿಗೆ ಸ್ವತಃ ಅವರೇ ವ್ಯಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆರ್‌ಟಿಐ ಕಾರ್ಯಕರ್ತ ರೋಹಿತ್ ಸಭರ್ವಾಲ್ ಸಲ್ಲಿಸಿದ್ದ ಆರ್ ಟಿಐ ಅರ್ಜಿಗೆ ಪ್ರಧಾನಿ ಸಚಿವಾಲಯ ಸ್ಪಷ್ಟಪಡಿಸಿದ್ದು, ಪ್ರಧಾನಿಯವರ ಬಟ್ಟೆ ಬರೆಗಳಿಗೆ ಸರ್ಕಾರದಿಂದ ಪಾವತಿಸುವುದಿಲ್ಲ ಎಂದು ತಿಳಿಸಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಂದ ಮೋದಿ ವರೆಗಿನ ಪ್ರಧಾನಿಗಳ ಬಟ್ಟೆಬರೆಗಳ ಖರ್ಚು ವಿವರ ಕೇಳಲಾಗಿತ್ತು. ಈ ವೇಳೆ ಸರ್ಕಾರದಿಂದ ಯಾವುದೇ ಹಣ ಪಾವತಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.