
ಪೇಕಾಂಗ್ (ಸಿಕ್ಕಿಂ): ಈಶಾನ್ಯದ ಗುಡ್ಡಗಾಡು ರಾಜ್ಯ ಸಿಕ್ಕಿಂನ ಮೊತ್ತಮೊದಲ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಅವರು ಹಿಂದಿನ ಕಾಂಗ್ರೆಸ್ ಸರ್ಕಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ‘ಹಿಂದಿನ ಸರ್ಕಾರಗಳು ಅಭಿವೃದ್ದಿಯಲ್ಲಿ ಆಮೆ ಗತಿ ಹೊಂದಿದ್ದವು’ ಎಂದು ಟೀಕಿಸಿದರು. ಸಿಕ್ಕಿಂ ವಿಮಾನ ನಿಲ್ದಾಣ ಉದ್ಘಾಟನೆಯೊಂದಿಗೆ ದೇಶವು 100 ವಿಮಾನ ನಿಲ್ದಾಣಗಳನ್ನು ಹೊಂದಿದಂತಾಗಿದೆ ಎಂದು ಪ್ರಧಾನಿ ಇದೇ ವೇಳೆ ಹರ್ಷಿಸಿದರು.
‘ಸ್ವಾತಂತ್ರ್ಯಾನಂತರ 2014ರವರೆಗೆ ದೇಶದಲ್ಲಿ ಕೇವಲ 65 ವಿಮಾನ ನಿಲ್ದಾಣಗಳು ಇದ್ದವು. ಆದರೆ ಕಳೆದ 4 ವರ್ಷಗಳಲ್ಲಿ 35 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಈ ಮುನ್ನ ವರ್ಷಕ್ಕೆ ಸರಾಸರಿ 1 ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿತ್ತು. ಈಗ ಈ ಸರಾಸರಿ 9ಕ್ಕೇರಿದೆ’ ಎಂದು ಅವರು ಹೇಳಿಕೊಂಡರು. ಕಳೆದ 70 ವರ್ಷಗಳಲ್ಲಿ ದೇಶ 400 ವಿಮಾನಗಳನ್ನು ಹೊಂದಿದ್ದರೆ, ಈಗ ಒಂದೇ ವರ್ಷದಲ್ಲಿ ವಿಮಾನ ಕಂಪನಿಗಳು 1000 ವಿಮಾನಗಳನ್ನು ಆರ್ಡರ್ ಮಾಡಿವೆ ಎಂದು ಅವರು ತಿಳಿಸಿದರು.
‘ಹವಾಯಿ ಚಪ್ಪಲಿ ಹಾಕಿಕೊಂಡವರೂ ಹವಾಯಿ ಜಹಾಜ್ (ವಿಮಾನ) ಯಾನ ಮಾಡಬೇಕು ಎಂಬುದು ನಮ್ಮ ಸರ್ಕಾರದ ಯತ್ನ. ಈಶಾನ್ಯ ರಾಜ್ಯಗಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲಾಗುವುದು’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.