ಪಾಕ್‌ನೊಂದಿಗೆ ಮೋದಿ ಮಾತುಕತೆಗೆ ಸಿದ್ಧ: ಇವರಿಗ್ಯಾರು ಹೇಳಿದ್ರೋ ಗೊತ್ತಿಲ್ಲ...

By Web DeskFirst Published Jun 20, 2019, 3:55 PM IST
Highlights

ಭಾರತ ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗೆ ಮುಂದಾಗಿದೆ! ಹೌದು ಪಾಕಿಸ್ತಾನದ ಮಾಧ್ಯಮಗಳು ಹೀಗೊಂದು ವರದಿ ಮಾಡಿವೆ.

ಇಸ್ಲಾಮಾಬಾದ್(ಜೂ. 20)  ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶಾಂತಿ ಮಾತುಕತೆ ಸಂಬಂಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಶಾ ಮಹಮದ್ ಖುರೇಶಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಸ್ಥಳೀಯ ಪಾಕ್ ಮಾಧ್ಯಮವೊಂದು ವರದಿ ಮಾಡಿದೆ.

ಭಾರತ ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಸ್ನೇಹ ಮತ್ತು ಸೌಹಾರ್ದ ಸಂಬಂಧ ಬೆಳೆಸಿಕೊಳ್ಳಲು ಮುಂದಾಗಿದೆ. ವಿವಾದಿತ ಪ್ರದೇಶದಲ್ಲಿ ಭಾರತ ಸಮಗ್ರ ಅಭಿವೃದ್ಧಿ ಬಯಸಿದ್ದು ಪಾಕ್ ನೊಂದಿಗೆ ಮಾತುಕತೆಗೆ ಮುಂದಾಗಲು ಸಿದ್ಧವಾಗಿದೆ ಎಂದು ಮಾಧ್ಯಮ ವರದಿ ಹೇಳಿದೆ.

ಪಾಕ್ ಕ್ರೀಡಾಪಟುಗಳಿಗೆ ಭಾರತದ ವೀಸಾ: ಕೇಂದ್ರ

ಆದರೆ ಭಾರತದ ವಿದೇಶಾಂಗ ಇಲಾಖೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮೋದಿ ಮತ್ತು ಜೈಶಂಕರ್ ಅವರಿಗೆ ಇಸ್ಲಾಮಾಬಾದ್ ನಿಂದ ಬಂದಿದ್ದ ಶುಭಾಶಯ ಪತ್ರಕ್ಕೆ ನೀಡಿರುವ ಪ್ರತಿಕ್ರಿಯೆಯನ್ನು ಅಲ್ಲಿನ ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಹೇಳಿದೆ.

ಕಳೆದ ಆಗಸ್ಟ್ ನಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಆದ ನಂತರ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸುವ ಪ್ರಸ್ತಾವ ಮುಂದಿಟ್ಟಿದ್ದರು. ಉಗ್ರವಾದವನ್ನು ಸಂಪೂರ್ಣ ಮೆಟ್ಟಿ ನಿಂತರೆ ಮಾತ್ರ ಮಾತುಕತೆ ಸಾಧ್ಯ ಎಂದು ಭಾರತ ಹೇಳಿತ್ತು.

 

click me!