ಮಾಲ್ಡೀವ್ಸ್'ಗೆ ಕ್ರಿಕೆಟ್ ಕಲಿಸಲಿರುವ ಭಾರತ: ಬ್ಯಾಟ್ ಗಿಫ್ಟ್ ನೀಡಿದ ಮೋದಿ!

By Web DeskFirst Published Jun 8, 2019, 8:34 PM IST
Highlights

ಮಾಲ್ಡೀವ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ| ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ವಿದೇಶ ಪ್ರವಾಸ| ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹ್ಮದ್ ಸೋಲಿ ಜೊತೆ ಮಾತುಕತೆ| ಮಾಲ್ಡೀವ್ಸ್'ನಲ್ಲಿ ಕ್ರಿಕೆಟ್ ಜನಪ್ರೀಯತೆಗಾಗಿ ಕ್ರಿಕೆಟ್ ಮೈದಾನ ಸ್ಥಾಪನೆ| ಭಾರತೀಯ ಕ್ರಿಕೆಟ್ ಆಟಗಾರರು ಸಹಿ ಮಾಡಿರುವ ಕ್ರಿಕೆಟ್ ಬ್ಯಾಟ್ ಉಡುಗೊರೆ| 

ಮಾಲೆ(ಜೂ.08): ಮಾಲ್ಡೀವ್ಸ್'ನಲ್ಲಿ ಕ್ರಿಕೆಟ್ ಕ್ರೀಡೆಯನ್ನು ಜನಪ್ರೀಯಗೊಳಿಸಲು ಭಾರತ ನೆರವು ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ವಿದೇಶ ಪ್ರವಾಸದಲ್ಲಿರುವ ಮೋದಿ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹ್ಮದ್ ಸೋಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

ಉಭಯ ದೇಶಗಳ ನಡುವೆ ಹಲವು ಮಹತ್ವದ ಒಪ್ಪಂದಗಳಾಗಿದ್ದು, ಪ್ರಮುಖವಾಗಿ ಮಾಲ್ಡೀವ್ಸ್'ನಲ್ಲಿ ಕ್ರಿಕೆಟ್ ಜನಪ್ರೀಯತೆಗಾಗಿ ಕ್ರಿಕೆಟ್ ಮೈದಾನಗಳನ್ನು  ಸ್ಥಾಪಿಸಲಾಗುವುದು ಎಂದು ಮೋದಿ ಘೋಷಿಸಿದರು.

ಈ ವೇಳೆ ಮಾಲ್ಡೀವ್ಸ್ ಅಧ್ಯಕ್ಷರಿಗೆ ಭಾರತೀಯ ಕ್ರಿಕೆಟ್ ಆಟಗಾರರು ಸಹಿ ಮಾಡಿರುವ ಕ್ರಿಕೆಟ್ ಬ್ಯಾಟ್ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಕ್ರಿಕೆಟ್ ಕ್ರೀಡೆ ಮಾಲ್ಡೀವ್ಸ್'ನಲ್ಲಿ ಜನಪ್ರೀಯತೆಗೊಳ್ಳಲಿ ಎಂದು ಹಾರೈಸಿದರು.

ಮಾಲ್ಡೀವ್ಸ್ ಕ್ರಿಕೆಟ್ ಆಟಗಾರರಿಗೆ ಬಿಸಿಸಿಐ ತರಬೇತಿ ನೀಡಲಿದ್ದು, ಈ ಮೂಲಕ ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿ ಎಂದು ಪ್ರಧಾನಿ ಆಶಿಸಿದರು.

President of Maldives, Ibrahim Mohamed Solih confers upon PM Narendra Modi, Maldives' highest honour accorded to foreign dignitaries, 'The Most Honourable Order of the Distinguished Rule of Nishan Izzuddeen'. pic.twitter.com/dzl79XZXzN

— ANI (@ANI)

ಇನ್ನು ಪ್ರಧಾನಿ ಮೋದಿ ಅವರಿಗೆ ಮಾಲ್ಡೀವ್ಸ್ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವ ನಿಶಾನ್ ಇಜುದ್ದೀನ್ ನೀಡು ಗೌರವಿಸಲಾಗಿದೆ.

PM Modi addressing the People's Majlis in Maldives: 'Neighborhood First' is our priority. Relations between India and Maldives are older than history. From time immemorial, blue waters have washed our shores. They have also nourished our cultures and civilisations. pic.twitter.com/a5ziYnUkLn

— ANI (@ANI)

ಬಳಿಕ ಮಾಲ್ಡೀವ್ಸ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ತನ್ನ ಸಹೋದರ ರಾಷ್ಟ್ರಗಳೊಂದಿಗೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಬಯಸುತ್ತದೆ ಎಂದು ಹೇಳಿದರು.

click me!