
ನವದೆಹಲಿ (ಡಿ.14): ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ದೇಶೀ ನೀರ್ಮಿತ INS ಕಲಾವರಿ ಸಬ್ ಮರಿನ್'ನನ್ನು ಮುಂಬೈನಲ್ಲಿಂದು ಲೋಕರ್ಪಣೆಗೊಳಿಸಿದ್ದಾರೆ. ಇದರಿಂದ ನೌಕಾಸೇನೆಗೆ ಮತ್ತೊಂದು ಆನೆ ಬಲ ಬಂದಂತಾಗಿದೆ.
ಫ್ರಾನ್ಸ್ ಸಹಯೋಗದಲ್ಲಿ ಮುಂಬೈ ಮೂಲದ ಎಂಡಿಎಲ್ ಎನ್ನುವ ಕಂಪನಿ ಈ ಸಬ್ ಮರೀನನ್ನು ನಿರ್ಮಿಸಿದೆ. ಸಬ್ ಮರೀನನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಐಎನ್'ಎಸ್ ಕಲ್ವಾರಿ ನಿರ್ಮಾಣದಲ್ಲಿ ಭಾಗಿಯಾದ ಎಲ್ಲಾ ಕೆಲಸಗಾರರಿಗೂ ನನ್ನ ಧನ್ಯವಾದಗಳು. ಅದೇ ರೀತಿ ನಮಗೆ ಸಂಪೂರ್ಣ ಸಹಕಾರ ನೀಡಿದ ಫ್ರಾನ್ಸ್'ಗೂ ಕೂಡಾ ಕೃತಜ್ಞತೆಗಳು. ಭಾರತ-ಫ್ರಾನ್ಸ್ ನಡುವಿನ ಸಹಭಾಗಿತ್ವ ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವುದಕ್ಕೆ ಇದೊಂದು ಉದಾಹರಣೆ ಎಂದು ಹೇಳಿದ್ದಾರೆ.
ಇಂದು ನಮ್ಮ ಪಾಲಿಗೆ ಸುದಿನ. ಇಂತಹದ್ದೊಂದು ಐತಿಹಾಸಿಕ ದಿನದಂದು ದೇಶದ ಎಲ್ಲಾ ನಾಗರೀಕರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ರಾಜ್ಯಪಾಲ ವಿದ್ಯಾ ಸಾಗರ್ ರಾವ್ ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.