ಇಲ್ಲಿ ಕುಸ್ತಿ ಅಲ್ಲಿ ದೋಸ್ತಿ! ಮೋದಿ-ಕ್ಸಿ ಜಿನ್ಪಿಂಗ್ ಪರಸ್ಪರ ಹೊಗಳಿಕೆ

Published : Jul 08, 2017, 12:28 AM ISTUpdated : Apr 11, 2018, 12:41 PM IST
ಇಲ್ಲಿ ಕುಸ್ತಿ ಅಲ್ಲಿ ದೋಸ್ತಿ! ಮೋದಿ-ಕ್ಸಿ ಜಿನ್ಪಿಂಗ್ ಪರಸ್ಪರ ಹೊಗಳಿಕೆ

ಸಾರಾಂಶ

ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಆರಂಭವಾದ ಜಿ-20 ಶೃಂಗಸಭೆಯ ಮೊದಲ ದಿನದ ಪಾರ್ಶ್ವದಲ್ಲಿ ‘ಬ್ರಿಕ್ಸ್’ ದೇಶಗಳ ಸಭೆಯೂ ಆಯೋಜಿತವಾಗಿತ್ತು. ಆದರೆ ಗಡಿ ಉದ್ವಿಗ್ನತೆಯ ಕಾರಣ ಉಭಯ ನಾಯಕರ ನಡುವೆ ಭೇಟಿ ನಡೆಯದೇ ಹೋಗಬಹುದು ಎಂಬ ಆತಂಕವಿತ್ತು. ದ್ವಿಪಕ್ಷೀಯ ಮಾತುಕತೆ ಕೂಡ ನಿಗದಿ ಆಗಿರಲಿಲ್ಲ. ಆದರೆ, ಇಲ್ಲಿ ಮೋದಿ ಮತ್ತು ಕ್ಸಿ ಅವರು ಮುಖಾಮುಖಿಯಾಗಿ ಹಸನ್ಮುಖಿಗಳಾಗಿ ಹಸ್ತಲಾಘವ ಮಾಡಿಕೊಂಡರು ಹಾಗೂ ಕುಶಲೋಪರಿ ವಿಚಾರಿಸಿ ಆತಂಕ ದೂರ ಮಾಡಿದರು. ಬಳಿಕ ಬ್ರಿಕ್ಸ್ ಸಭೆಯಲ್ಲಿ ಇಬ್ಬರೂ ನಾಯಕರು ಮಾತನಾಡಿ ಉಭಯ ರಾಷ್ಟ್ರಗಳ ಬಗ್ಗೆ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದರು.

ಹ್ಯಾಂಬರ್ಗ್(ಜು.08): ಒಂದೆಡೆ ಭಾರತ-ಚೀನಾ ನಡುವೆ ಸಿಕ್ಕಿಂ ಭೂಭಾಗದ ಯಜಮಾನಿಕೆ ವಿಚಾರವಾಗಿ ಸಂಘರ್ಷ ನಡೆದಿರುವ ನಡುವೆಯೇ, ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಇಲ್ಲಿ ಶುಕ್ರವಾರ ಹಸ್ತಲಾಘವ ಮಾಡಿಕೊಂಡು, ಪರಸ್ಪರ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಈ ನಡುವೆ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ತಣಿಸಲು ಇದು ನೆರವಾಗಬಹುದೇ ಎಂಬ ಆಶಾಭಾವ ಹುಟ್ಟುಹಾಕಿದ್ದಾರೆ.

ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಆರಂಭವಾದ ಜಿ-20 ಶೃಂಗಸಭೆಯ ಮೊದಲ ದಿನದ ಪಾರ್ಶ್ವದಲ್ಲಿ ‘ಬ್ರಿಕ್ಸ್’ ದೇಶಗಳ ಸಭೆಯೂ ಆಯೋಜಿತವಾಗಿತ್ತು. ಆದರೆ ಗಡಿ ಉದ್ವಿಗ್ನತೆಯ ಕಾರಣ ಉಭಯ ನಾಯಕರ ನಡುವೆ ಭೇಟಿ ನಡೆಯದೇ ಹೋಗಬಹುದು ಎಂಬ ಆತಂಕವಿತ್ತು. ದ್ವಿಪಕ್ಷೀಯ ಮಾತುಕತೆ ಕೂಡ ನಿಗದಿ ಆಗಿರಲಿಲ್ಲ. ಆದರೆ, ಇಲ್ಲಿ ಮೋದಿ ಮತ್ತು ಕ್ಸಿ ಅವರು ಮುಖಾಮುಖಿಯಾಗಿ ಹಸನ್ಮುಖಿಗಳಾಗಿ ಹಸ್ತಲಾಘವ ಮಾಡಿಕೊಂಡರು ಹಾಗೂ ಕುಶಲೋಪರಿ ವಿಚಾರಿಸಿ ಆತಂಕ ದೂರ ಮಾಡಿದರು. ಬಳಿಕ ಬ್ರಿಕ್ಸ್ ಸಭೆಯಲ್ಲಿ ಇಬ್ಬರೂ ನಾಯಕರು ಮಾತನಾಡಿ ಉಭಯ ರಾಷ್ಟ್ರಗಳ ಬಗ್ಗೆ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದರು.

ಮೊದಲು ಮಾತನಾಡಿದ ಮೋದಿ ಅವರು, ‘ಚೀನಾ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆ ಬ್ರಿಕ್ಸ್‌ನ ವೇಗವನ್ನು ಕಾಯ್ದುಕೊಳ್ಳುತ್ತಿದೆ. ಇದು ನಮ್ಮ ನಡುವಿನ ಸಹಕಾರವನ್ನು ಇನ್ನಷ್ಟು ಉತ್ತಮಗೊಳಿಸಿದೆ. ಇದಲ್ಲದೆ, ಈ ವರ್ಷಾಂತ್ಯದಲ್ಲಿ ಚೀನಾದ ಕ್ಸಿಯಾಮೆನ್‌ನಲ್ಲಿ ನಡೆಯಲಿರುವ ಐದು ರಾಷ್ಟ್ರಗಳ ಸಮಾವೇಶ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಭಾರತ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಭರವಸೆ ನೀಡಿದರು. ಅಲ್ಲದೆ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಕುಟುಕಿದ ಅವರು,‘ಜಿ-20 ಹಾಗೂ ಬ್ರಿಕ್ಸ್ ದೇಶಗಳು ಉಗ್ರವಾದದ ವಿಷಯದಲ್ಲಿ ಒಟ್ಟಾಗಿ ಹೋರಾಡಬೇಕು’ ಕರೆ ನೀಡಿದರು.

ಮೋದಿಯವರ ಬಳಿಕ ಚೀನಾದ ಅಧ್ಯಕ್ಷ ಕ್ಸಿ ಮಾತನಾಡಿ, ‘ಚೀನಾಗೆ ಬ್ರಿಕ್ಸ್ ಅಧ್ಯಕ್ಷತೆ ಸಿಗುವ ಮುನ್ನ ಭಾರತವು ಬ್ರಿಕ್ಸ್ ಆಂದೋಲನವನ್ನು ಪ್ರಶಂಸಾರ್ಹ ರೀತಿಯಲ್ಲಿ ನಡೆಸಿತು’ ಎಂದು ಪ್ರಶಂಸಿಸಿದರಲ್ಲದೇ, ‘ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಮೆಚ್ಚತಕ್ಕಂಥದ್ದು’ ಎಂದು ಅಭಿನಂದಿಸಿದರು. ಅಲ್ಲದೆ 2016ರಲ್ಲಿ ಭಾರತದ ಗೋವಾದಲ್ಲಿ ನಡೆದಿದ್ದ ಬ್ರಿಕ್ಸ್ ಸಮಾವೇಶದ ಕ್ಷಣಗಳನ್ನು ಕ್ಸಿ ಸ್ಮರಿಸಿದರು ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಇದಲ್ಲದೆ, ಪ್ರಾದೇಶಿಕ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಕ್ಸಿ ಅವರು ಕರೆ ನೀಡುವ ಮೂಲಕ ಭಾರತದ ಜತೆಗಿನ ಗಡಿ ವಿವಾದವನ್ನು ಶಾಂತಿಯುತ ರೀತ್ಯ ಬಗೆಹರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.

‘ಕ್ಸಿ ಮತ್ತು ಮೋದಿ ಅವರ ನಡುವೆ ‘ಸಾಕಷ್ಟು ವಿಷಯ’ಗಳು ಚರ್ಚೆಯಾದವು’ ಎಂದು ಭಾರತದ ವಿದೇಶಾಂಗ ವಕ್ತಾರ ಗೋಪಾಲ್ ಬಾಗ್ಲೆ ಹೇಳಿದ್ದಾರೆ. ಆದರೆ ಯಾವ ವಿಷಯ ಎಂಬ ಬಗ್ಗೆ ನಿಖರವಾದ ವಿವರ ನೀಡಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಳಂದ ಮತಚೋರಿ ಆರೋಪ ರಾಜಕೀಯ ಪ್ರೇರಿತ: ಎಸ್‌ಐಟಿ ಕ್ರಮದ ವಿರುದ್ಧ ಸುಭಾಷ್ ಗುತ್ತೇದಾರ್ ಕಿಡಿ
ಪಶ್ಚಿಮ ಬಂಗಾಳದಲ್ಲಿ 1 ಕೋಟಿ ನಕಲಿ ಮತದಾರರಿಗೆ ಕೊಕ್ ಸಾಧ್ಯತೆ