
ತುಮಕೂರು(ಜು.07): ಗೃಹ ಸಚಿವ ತವರು ಜಿಲ್ಲೆಯಲ್ಲೇ ಪೊಲೀಸ್ ಇಲಾಖೆ ಮಾನ ಕಳೆಯುವಂತಾ ಪ್ರಕರಣ ನಡೆದಿದೆ. ಲಂಚದ ಹಣಕ್ಕಾಗಿ ರಕ್ಷಕರೇ ರಾಕ್ಷಸರಾಗಿದ್ದಾರೆ. ಖಾಕಿಯ ನಿಜ ಬಣ್ಣ ಬಯಲಾಗಿದೆ.
ಹೀಗೆ ಲಾಠಿಯಿಂದ ಚುಚ್ಚಿ.. ಟೀ ಅಂಗಡಿ ಮಾಲೀಕನನ್ನು ಎಳೆದಾಡುತ್ತಿರುವ ಈತ ತಿಪಟೂರಿನ ಸಬ್ ಇನ್ಸೆಪೆಕ್ಟರ್ ಶ್ರೀಕಾಂತ್. ಮಾಮೂಲಿ ಕೊಡಲಿಲ್ಲ ಎಂದು ಈ ಪೊಲೀಸಪ್ಪ ಹೀಗೆ ರೌದ್ರಾವತಾರ ತಳೆದಿದ್ದಾನೆ. ಬಿದರೆಗುಡಿ ಗ್ರಾಮದಲ್ಲಿ ಹಾದು ಹೋಗುವ ತುಮಕೂರು-ಶಿವಮೊಗ್ಗ ಹೆದ್ದಾರಿ ಪಕ್ಕದಲ್ಲಿರುವ ಟೀ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ದೌರ್ಜವ್ಯವೆಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಪ್ರಶ್ನಿಸಿದವರ ಮೇಲೂ ಇನ್ಸ್ಪೆಕ್ಟರ್ ಶ್ರೀಕಾಂತ್ ಹಲ್ಲೆ ನಡೆಸಿದ್ದಾರೆ.
15 ವರ್ಷಗಳಿಂದ ಕುಮಾರ್ ಟೀ ಅಂಗಡಿ ನಡೆಸುತ್ತಿದ್ದಾರೆ. ಕಳೆದ ಜೂನ್ 3ನೇ ತಾರೀಕ್ನಂದು ಅಂಗಡಿಗೆ ಬಂದ ಇನ್ಸ್ಪೆಕ್ಟರ್ ಶ್ರೀಕಾಂತ್ ಇನ್ಮುಂದೆ ಟೀ ಅಂಗಡಿ ಮುಂದುವರೆಯಬೇಕೆಂದರೆ ತಿಂಗಳಿಗೆ 5 ಸಾವಿರ ಮಾಮೂಲಿ ನೀಡುವಂತೆ ಧಮ್ಕಿ ಹಾಕಿದ್ದರು. ಮಾಮೂಲಿ ಕೊಡಲು ನಿರಾಕರಿಸಿದ್ದಕ್ಕೆ ಜೂನ್ 5ನೇ ತಾರೀಕು ಬಂದು ಹೀಗೆ ದಾಂಧಲೆ ನಡೆಸಿದ್ದಾರೆ. ಒದ್ದು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಪೊಲೀಸರೆಲ್ಲಾ ಸೇರಿ ಕುಮಾರ್ ನನ್ನು ಹಿಡಿದು ಬಲವಂತವಾಗಿ ಠಾಣೆಗೆ ಎಳೆದೋಯ್ದಿದ್ದಾರೆ. ಈ ರೀತಿ ಗೂಂಡಾಗಿರಿ ನಡೆಸಿದ್ದಕ್ಕೆ ಕುಮಾರ್ ಸಬ್ ಇನ್ಸೆಪೆಕ್ಟರ್ ವಿರುದ್ಧ ಡಿಎವೈಸ್ಪಿಗೆ ದೂರು ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾನೂನು ಕಾಪಾಡಬೇಕಾದ ಪೊಲೀಸರೇ ಲಂಚಕ್ಕಾಗಿ ರೌಡಿಗಳಂತೆ ವರ್ತಿಸಿರುವುದು ನಾಚಿಗೇಡು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.