
ನವದೆಹಲಿ(ಡಿ.14): ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಹಾಗೂ ತಮ್ಮನ್ನು ಪದಚ್ಯುತಗೊಳಿಸಲು ಪಾಕಿಸ್ತಾನ ಸಂಚು ರೂಪಿಸಿದೆ, ಈ ಕುರಿತ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು ಎಂದು ಆರೋಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ಮುಜುಗರವಾಗುವಂತಹ ಬೆಳವಣಿಗೆಯೊಂದು ನಡೆದಿದೆ.
ಗುಜರಾತ್ ಮತದಾರರ ಗಮನ ಸೆಳೆಯಲು ಮೋದಿ ಹಾರಾಟ ನಡೆಸಿದ ಸೀ ಪ್ಲೇನ್, ಪಾಕಿಸ್ತಾನದ ಕರಾಚಿಯಿಂದ ಗುಜರಾತಿಗೆ ಬಂದಿತ್ತು ಎಂಬ ವರದಿ ಸಂಚಲನಕ್ಕೆ ಕಾರಣವಾಗಿದ್ದು, ಪ್ರತಿ ಪಕ್ಷಗಳು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಮೋದಿ ಪ್ರಯಾಣಿಸಿದ ಕೊಡಿಯಾಕ್ 100 ವಿಮಾನ ಕರಾಚಿಯಲ್ಲಿ ಮಾಸಾರಂಭದಿಂದ ನಿಂತಿತ್ತು.
ಡಿ.3ರಂದು ಹಾರಾಟ ಆರಂಭಿಸಿ, ಅದೇ ದಿನ ಸಂಜೆ ಮುಂಬೈಗೆ ಬಂದಿತ್ತು. ಮರುದಿನ ಅಹಮದಾಬಾದ್ ತಲುಪಿ, ಮಂಗಳವಾರ ಮೋದಿ ಅವರನ್ನು ಹೊತ್ತು ಸಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.