ಶೂರ್ಪನಖಿಗೆ ರೇಣುಕಾ ಹೋಲಿಸಿ ಮೋದಿ ಟಾಂಗ್

By Suvarna Web DeskFirst Published Feb 8, 2018, 10:02 AM IST
Highlights

ರಾಜ್ಯಸಭೆಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗ ಕಾಂಗ್ರೆಸ್ಸಿನ ರೇಣುಕಾ ಚೌಧರಿ ಗಹಗಹಿಸಿ ನಕ್ಕರು.

ನವದೆಹಲಿ: ರಾಜ್ಯಸಭೆಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗ ಕಾಂಗ್ರೆಸ್ಸಿನ ರೇಣುಕಾ ಚೌಧರಿ ಗಹಗಹಿಸಿ ನಕ್ಕರು.

ಆಗ ಸಭಾಪತಿ ವೆಂಕಯ್ಯ ನಾಯ್ಡು ಅವರು ರೇಣುಕಾರನ್ನು ತಡೆಯಲು ಮುಂದಾಗಿ, ‘ಸಮಸ್ಯೆ ಇದ್ದರೆ ವೈದ್ಯರ ಹತ್ತಿರ ಹೋಗಿ’ ಎಂದು ಗರಂ ಆದರು. ಈ ವೇಳೆ ನಾಯ್ಡು ಅವರನ್ನೇ ತಡೆದ ಮೋದಿ, ‘ರಾಮಾಯಣ ಸೀರಿಯಲ್‌ನಲ್ಲಿ ಈ ನಗು ಕೇಳಿದ್ದೆ. ಬಳಿಕ ಈಗಲೇ ಕೇಳುತ್ತಿರುವೆ. ನಗಲಿ ಬಿಡಿ..’ ಎಂದಾಗ ರಾಜ್ಯಸಭೆ ಗೊಳ್ಳೆಂದು ನಕ್ಕಿತು.

ರೇಣುಕಾ ಮುಖ ಕೆಂಪಗಾಯಿತು. ಕಲಾಪದ ಬಳಿಕ ಸುದ್ದಿಗಾರರ ಮುಂದೆ ಪ್ರತಿಕ್ರಿಯೆ ನೀಡಿದ ರೇಣುಕಾ, ‘ನನನ್ನು ರಾಮಾಯಣದಲ್ಲಿ ನಗುತ್ತಿದ್ದ ಶೂರ್ಪನಖಿಗೆ ಹೋಲಿಸಿ ಮೋದಿ ಅವರು ಮಹಿಳಾ ಸಮುದಾಯಕ್ಕೇ ಅವಮಾನ ಮಾಡಿದ್ದಾರೆ’ ಎಂದು ಅಳಲು ತೋಡಿಕೊಂಡರು.

click me!