
ನವದೆಹಲಿ: ದೇಶದ ಹಲವೆಡೆ ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ನೋಟುಗಳ ಮುದ್ರಣವನ್ನು ತ್ವರಿತಗೊಳಿಸಿದೆ. ಆರ್‌ಬಿಐನ ನಾಲ್ಕು ನೋಟು ಮುದ್ರಣಾಲಯಗಳಲ್ಲಿ ದಿನದ 24 ಗಂಟೆಯೂ ನಿರಂತರವಾಗಿ 500 ಹಾಗೂ 200 ರು. ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ದೇಶದ ನಾಲ್ಕು ನೋಟು ಮುದ್ರಣಾಲಯಗಳಲ್ಲಿ 18-19 ಗಂಟೆ ನೋಟುಗಳನ್ನು ಮುದ್ರಣ ಮಾಡಲಾಗುತ್ತಿದ್ದು, 3ರಿಂದ 4ಗಂಟೆ ವಿರಾಮ ನೀಡಲಾಗುತ್ತಿದೆ. ಆದರೆ ನಗದಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮುದ್ರಣಾಲಯಗಳು 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಸಾಮಾನ್ಯವಾಗಿ ನೋಟು ಮುದ್ರಣಗೊಂಡ ಬಳಿಕ ಅವು ಚಲಾವಣೆಗೆ ಬರಲು 15 ದಿನಗಳನ್ನು ತೆಗೆದುಕೊಳ್ಳುತ್ತದೆ. ಈಗಾಗಲೇ ಮುದ್ರಣಗೊಂಡಿರುವ ಹೆಚ್ಚುವರಿ ನೋಟುಗಳು ಈ ತಿಂಗಳ ಅಂತ್ಯದ ವೇಳೆಗೆ ಲಭ್ಯವಾಗಲಿವೆ.
ಇದಕ್ಕೂ ಅಪನಗದೀಕರಣದ ಬಳಿಕ 2000 ರು. ಹೊಸ ನೋಟುಗಳನ್ನು ವೇಗವಾಗಿ ಮುದ್ರಿಸಲು ಆರ್‌ಬಿಐನ ನೋಟು ಮುದ್ರಣಾಲಯಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.