ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಮೂವರ ಸೆರೆ

By Suvarna Web DeskFirst Published Nov 28, 2016, 4:06 PM IST
Highlights

ಉಗ್ರ ನಿಗ್ರಹ ದಳವಾದ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ವು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇವರು ಅಲ್‌ಖೈದಾ ಸಂಘಟನೆಯ ಸದಸ್ಯರು ಎಂದು ಶಂಕಿಸಲಾಗಿದೆ.

ಮಧುರೈ(ನ.28): ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 22 ಮಂದಿ ರಾಜಕೀಯ ನಾಯಕರುಗಳ ಕೊಲೆಗೆ ಯೋಜನೆ ರೂಪಿಸಿದ್ದ ಮೂವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ತಂಡ ತಮಿಳುನಾಡಿನ ಮಧುರೈನಲ್ಲಿ ಬಂಧಿಸಿದೆ.

ಉಗ್ರ ನಿಗ್ರಹ ದಳವಾದ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ವು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇವರು ಅಲ್‌ಖೈದಾ ಸಂಘಟನೆಯ ಸದಸ್ಯರು ಎಂದು ಶಂಕಿಸಲಾಗಿದೆ.

ಮಧುರೈನಲ್ಲಿ ಕಾರ್ಯಾಚರಣೆ ನಡೆಸಿದ ಎನ್‌ಐಎ ತಂಡವು ಆರೋಪಿಗಳಾದ ಎಂ ಕರೀಂ, ಆಸಿಫ್ ಸುಲ್ತಾನ್ ಮೊಹಮ್ಮದ್ ಮತ್ತು ಅಬ್ಬಾಸ್ ಅಲಿ ಎಂಬುವರನ್ನು ಬಂಧಿಸಿದೆ. ಅಲ್ಲದೆ, ಸ್ಪೋಟಕಗಳು, ಹತ್ಯೆಯ ಗುರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ವ್ಯಕ್ತಿಗಳ ಕುರಿತು ಮಾಹಿತಿ ಹೊಂದಿದ್ದ ಪೆನ್‌'ಡ್ರೈವ್‌ನಲ್ಲಿನ ದಾಖಲೆಗಳು ಮತ್ತು ಕರಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ತಿಳಿಸಿದೆ. ಅಲ್‌ಖೈದಾ ಸಂಘಟನೆಯ ಮತ್ತಿಬ್ಬರು ಸದಸ್ಯರಿಗಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

click me!