
ಗುಜರಾತ್ (ನ.30): ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಘಟನೆಯೊಂದು ನಡೆಯಿತು. ನವ್‌ಸರಿಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲೇ ನಮಾಜ್ ಧ್ವನಿ ಕೇಳಿಸಿತು. ಆಜಾನ್ ಪೂರ್ಣವಾಗುವವರೆಗೂ ಭಾಷಣವನ್ನು ನಡುವೆ ನಿಲ್ಲಿಸಿ ಮೌನವಾಗಿ ನಿಂತುಕೊಂಡರು. ಆಜಾನ್ ಪೂರ್ಣಗೊಂಡ ಬಳಿಕ ಮತ್ತೆ ತಮ್ಮ ಭಾಷಣ ಮುಂದುವರೆಸಿದರು. ಪ್ರಧಾನಿ ಮೋದಿ ಅವರ ಈ ನಡೆ ಜನರನ್ನು ಚಕಿತಗೊಳಿಸಿತು.
ಮೋದಿಯ ಈ ನಡೆ ಬಗ್ಗೆ ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ನಮಾಜ್ ವೇಳೆ ಮೋದಿ ಅವರು ಭಾಷಣ ನಿಲ್ಲಿಸಿದ್ದು ಇದೇ ಮೊದಲಲ್ಲ. ಈ ಹಿಂದೊಮ್ಮೆ ಪಶ್ಚಿಮ ಬಂಗಾಳದ ಖರಗ್'ಪುರದಲ್ಲಿ ಭಾಷಣ ಮಾಡುವ ವೇಳೆ ಆಜಾನ್ ಧ್ವನಿ ಕೇಳಿಸಿದಾಗಲೂ ಪ್ರಧಾನಿ ತಮ್ಮ ಭಾಷಣವನ್ನು ನಿಲ್ಲಿಸಿ ಮೌನ ವಹಿಸಿದ್ದರು. ಆಗ ಮೋದಿ, ಯಾರದೇ ಪ್ರಾರ್ಥನೆಯಾಗಲಿ ನಡುವೆ ಅಡ್ಡಿಪಡಿಸುವುದು ನನಗೆ ಇಷ್ಟವಿಲ್ಲ. ಹಾಗಾಗಿ ಭಾಷಣವನ್ನು ನಡುವೆ ನಿಲ್ಲಿಸಬೇಕಾಯಿತು ಎಂದಿದ್ದರು. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಸೌರಾಷ್ಟ್ರ ಕ್ಷೇತ್ರದಲ್ಲಿ ಮೋದಿ ರ್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡುವಾಗ ಈ ಘಟನೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.