ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ| ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ| ಎಲ್ಲಾ ಸಂಸದರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ಮೋದಿ| ನವಭಾರತದ ನಿರ್ಮಾಣದ ಸಂಕಲ್ಪಕ್ಕೆ ಸರ್ಕಾರ ಬದ್ಧ ಎಂದ ಪ್ರಧಾನಿ| ದೇಶದ ಜನತೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಬದ್ಧ| ಸುಭದ್ರ ಸರ್ಕಾರ ರಚಿಸಿದ ಜನತೆಗ ಧನ್ಯವಾದ ತಿಳಿಸಿದ ಮೋದಿ| ವ್ಯಂಗ್ಯಭರಿತ ಧಾಟಿಯಲ್ಲಿ ವಿಪಕ್ಷಗಳ ಕಾಲೆಳೆದ ಪ್ರಧಾನಿ ಮೋದಿ|
ನವದೆಹಲಿ(ಜೂ.25): 2014ರ ಲೋಕಸಭೆ ಚುನಾವಣೆಯನ್ನು ಈ ದೇಶದ ಜನತೆ ಒಂದು ಪ್ರಯೋಗವನ್ನಾಗಿ ಸ್ವೀಕರಿಸಿದ್ದರು. ಆದರೆ 2019ರ ಚುನಾವಣೆಯನ್ನು ಆ ಪ್ರಯೋಗದ ಸದುಪಯೋಗ ಕಂಡರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
PM Narendra Modi is replying to the 'Motion Of Thanks On the President's Address', in the Lok Sabha. pic.twitter.com/rQy13yoYjq
— ANI (@ANI)ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಮೋದಿ, ಮತದಾರ ಒಂದು ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ತರುವ ಮೂಲಕ ಭವಿಷ್ಯದ ಭಾರತಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.
PM Narendra Modi in Lok Sabha: After many decades, the country has given a strong mandate, a government was voted back into power. pic.twitter.com/nj7d3qxTUN
— ANI (@ANI)ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಾತನಾಡಿದ ಮೋದಿ, 17ನೇ ಲೋಕಸಭೆಯ ಮೊದಲ ಅಧಿವೇಶನ ನಡೆದ ಬಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
PM Modi: Brave women and men died for the nation during the freedom struggle. We have to build the India our freedom fighters dreamt of. I urge all to observe Gandhi Ji's 150th birth anniversary and 75 years of India's freedom with great enthusiasm. pic.twitter.com/YYvjiSQkzh
— ANI (@ANI)ಆಡಳಿತ ಪಕ್ಷ, ವಿಪಕ್ಷಗಳ ಎಲ್ಲಾ ಸಂಸದರು ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಮೇಲೆ ಶಿಸ್ತುಬದ್ಧವಾಗಿ ಮಾತನಾಡಿದ್ದು, ಇದಕ್ಕಾಗಿ ತಾವು ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಧಾನಿ ತಿಳಿಸಿದರು.
PM Modi in Lok Sabha: Sardar Sarovar Dam was the brainchild of Sardar Patel. But, work on this dam was constantly delayed. As Chief Minister of Gujarat, I had to sit on a fast for this project. After NDA came to power, the work speed increased and it is benefiting many people pic.twitter.com/OLkSIv3OY3
— ANI (@ANI)ಸರ್ಕಾರ ದೇಶದ ಜನತೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಬದ್ಧವಾಗಿದ್ದು, ನವಭಾರತದ ನಿರ್ಮಾಣದ ತನ್ನ ಸಂಕಲ್ಪದಿಂದ ಹಿಂದೆ ಸರಿಯುವದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
PM Modi: Hum kisi ki lakeer chhoti karne mein apna samay barbaad nahi karte hain, hum humari lakeer lambi karne mein zindagi khapa denge. Aap ki unchai aapko mubarak ho. Aap itna uncha chale gaye hain ki zameen dikhni band ho gayi hai, jaddon se ukhad gaye hain. pic.twitter.com/yxUuAPGADm
— ANI (@ANI)ಇದೇ ವೇಳೆ ಪ್ರತಿಪಕ್ಷಗಳನ್ನು ತಮ್ಮ ವ್ಯಂಗ್ಯಭರಿತ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡ ಪ್ರಧಾನಿ, ನೀವು ಅದೆಷ್ಟು ಎತ್ತರಕ್ಕೆ ಬೆಳೆಯುತ್ತೀರೋ ಬೆಳೆಯಿರಿ ನಾವು ಮಾತ್ರ ಜನರ ಮಧ್ಯೆ ಇದ್ದು ಅವರ ಮನಸ್ಸಿನಲ್ಲಿ ಉಳಿಯುತ್ತೇವೆ ಎಂದು ಚುಚ್ಚಿದರು.
PM Modi in Lok Sabha: Who did it? Who did it? was being asked by some people during the debate. Today is 25th June. Who imposed the Emergency? We can't forget those dark days. pic.twitter.com/vLQLg96QD0
— ANI (@ANI)ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಎಲ್ಲಾ ಅಂಶಗಳ ಮೇಲೆ ಕೆಲಸ ನಿರ್ವಹಿಸಲು ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಸದನದ ಸಹಾಯ ಕೋರುತ್ತೇನೆ ಎಂದು ಮೋದಿ ಹೇಳಿದರು.