
ಹ್ಯಾಂಬರ್ಗ್(ಜು.08): ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚಿಸಿ ದೇಶದಿಂದ ಪಲಾಯನ ಮಾಡಿ ಇಂಗ್ಲೆಂಡ್'ನಲ್ಲಿ ನೆಲಸಿರುವ ದೇಶದ್ರೋಹಿ ಉದ್ಯಮಿ ವಿಜಯ್ ಮಲ್ಯಾ ಅವರನ್ನು ಭಾರತಕ್ಕೆ ವಾಪಸ್ ಕರೆತರಲು ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರ ನೆರವು ಕೋರಿದ್ದಾರೆ.
2016ರಿಂದ ಇಂಗ್ಲೆಂಡ್'ನಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯಾ ವಿರುದ್ಧ ಈಗಾಗಲೇ ಗೃಹ ಸಚಿವಾಲಯ, ಜಾರಿ ನಿರ್ದೇಶನಾಲಯ ಹಲವಾರು ವಾರಂಟ್'ಗಳನ್ನು ಹೊರಡಿಸಿದೆ. ಸಿಬಿಐ ಅಧಿಕಾರಿಗಳು ಇಂಗ್ಲೆಂಡ್'ಗೆ ತೆರಳಿ ಆತನನ್ನು ಕರೆತರಲು ಯತ್ನಿಸಿದರೂ ಯೋಜನೆ ಸಫಲವಾಗಿಲ್ಲ. ಇತ್ತೀಚಿಗಷ್ಟೆ ಇಂಗ್ಲೆಂಡ್ ಸರ್ಕಾರ ಮಲ್ಯಾನನ್ನು ಬಂಧಿಸಿದರೂ 650000 ಪೌಂಡ್ ಜಾಮೀನು ನೀಡಿ ಬಿಡುಗಡೆಗೊಂಡಿದ್ದರು.
ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಪ್ರಕರಣದಲ್ಲಿ ವಿಶೇಷ ಆಸಕ್ತಿ ವಹಿಸಿದ್ದು, ಜರ್ಮನಿಯ ಹ್ಯಾಂಬರ್ಗ್'ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಥೆರೆಸಾ ಮೇ ಅವರನ್ನು ಭೇಟಿ ಮಾಡಿ ಆರ್ಥಿಕ ಅಪರಾಧಿಗಳನ್ನು ವಾಪಸ್ ಕರೆತರುವ ಬಗ್ಗೆ ಚರ್ಚಿಸಿದ್ದಾರೆ. ಕಿಂಗ್ ಫಿಷರ್ ಏರ್'ಲೈನ್ಸ್ ಆರಂಭಿಸಲು ವಿಜಯ್ ಮಲ್ಯಾ ಭಾರತೀಯ ಬ್ಯಾಂಕ್'ಗಳಿಂದ 9 ಸಾವಿರ ಕೋಟಿಗೂ ರೂ.ಗೂ ಹೆಚ್ಚು ಸಾಲ ಪಡೆದು ತೀರಿಸದೆ ಇಂಗ್ಲೆಂಡ್'ಗೆ ಪಲಾಯನ ಮಾಡಿದ್ದಾರೆ.
1992ರ ಭಾರತ - ಇಂಗ್ಲೆಂಡಿನ ಗಡಿಪಾರಿನ ಒಪ್ಪಂದದ ಪ್ರಕಾರ 2002ರ ಗೋದ್ರಾ ಹತ್ಯೆಗಳ ಆರೋಪಕ್ಕೆಸಂಬಂಧಿಸಿದಂತೆ ಕಳೆದ ವರ್ಷದ ಅಕ್ಟೋಬರ್'ನಲ್ಲಿ ಸಮೀರ್'ಬಾಯಿ ವಿನುಬಾಯಿ ಪಟೇಲ್ ಎಂಬಾತನನ್ನು ಇಂಗ್ಲೆಂಡಿನಿಂದ ಭಾರತಕ್ಕೆ ಕರೆತರಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.