‘ಆರ್‌ಎಸ್‌ಎಸ್‌ ಪಾಲಿಗೆ ಮೋದಿ ಶಿವಲಿಂಗದ ಮೇಲಿನ ಚೇಳು’!

Published : Oct 28, 2018, 04:58 PM ISTUpdated : Oct 28, 2018, 06:14 PM IST
‘ಆರ್‌ಎಸ್‌ಎಸ್‌ ಪಾಲಿಗೆ ಮೋದಿ ಶಿವಲಿಂಗದ ಮೇಲಿನ ಚೇಳು’!

ಸಾರಾಂಶ

ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ಶಶಿ ತರೂರ್! ‘ಮೋದಿ ಆರ್ ಎಸ್ ಎಸ್ ಪಾಲಿಗೆ ಶಿವಲಿಂಗದ ಚೇಳಿದ್ದಂತೆ’! ‘ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಿತಿಯನ್ನು ಮೀರಿದ್ದಾರೆ’! ‘ಮೋದಿ ಹಾಗೂ ಹಿಂದುತ್ವ ಸೇರಿ ಮೋದಿತ್ವ ಆಗಿದೆ’! ಮೋದಿ ಆರ್ ಎಸ್ ಎಸ್ ಗಿಂತ ಎತ್ತರಕ್ಕೆ ಬೆಳೆದಿದ್ದಾರೆ ಎಂದ ತರೂರ್

ಬೆಂಗಳೂರು(ಅ.28): ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್‌ ಪಾಲಿಗೆ ಶಿವಲಿಂಗದ ಮೇಲೆ ಕುಳಿತ ಚೇಳಿನಂತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ವ್ಯಂಗ್ಯವಡಿದ್ದಾರೆ. 

ಪ್ರಧಾನಿ ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಿತಿಯನ್ನು ಮೀರಿದ್ದು, ಮೋದಿಯವರ ವ್ಯಕ್ತಿತ್ವದ ಬೆಳವಣಿಗೆಯ ರೀತಿ ಕಂಡು ಆರ್‌ಎಸ್‌ಎಸ್‌ಗೆ ನಿರಾಸೆಯಾಗಿದೆ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಶಶಿ ತರೂರ್, ಮೋದಿ ಆರ್ ಎಸ್ ಎಸ್ ಪಾಲಿಗೆ ಶಿವಲಿಂಗದಲ್ಲಿ ಕುಳಿತಿರುವ ಚೇಳಿನಂತೆ ಎಂದು ವ್ಯಂಗ್ಯವಾಗಿ ನುಡಿದರು. ನೀವು ಚೇಳನ್ನು ನೀವು ನಿಮ್ಮ ಕೈಯಿಂದ ತೆಗೆದು ಹಾಕಲು ಅಥವಾ ಚಪ್ಪಲಿಯಿಂದ ಹೊಡೆದು ಓಡಿಸಲು ಬರುವುದಿಲ್ಲ ಎಂದು  ಯುವುದಕ್ಕಾಗಲಿ ಬರುವುದಿಲ್ಲ ಎಂದು ಹೇಳುವ ಮೂಲಕ ತರೂರ್ ಹೊಸ ವಿವಾದ ಸೃಷ್ಟಿಸಿದರು.

ಮೋದಿ ಹಾಗೂ ಹಿಂದುತ್ವ ಸೇರಿ ಆಗಿರುವ ಮೋದಿತ್ವವು ಆರ್‌ಎಸ್‌ಎಸ್‌ ಗಿಂತ ಹೆಚ್ಚು ಎತ್ತರದಲ್ಲಿ ಬೆಳೆದಿದೆ. ಕೇಂದ್ರ ಸರ್ಕಾರದ ಕೇಂದ್ರೀಕೃತ ಉನ್ನತ ಅಧಿಕಾರದಿಂದಾಗಿ ಅಧಿಕಾರಶಾಹಿ ವರ್ಗ ಪ್ರಧಾನಿ ಕಚೇರಿ ಮುಂದೆ ಕಾದು ನಿಲ್ಲಬೇಕಾಗಿದೆ ಎಂದು ತರೂರ್ ಅಭಿಪ್ರಾಯಪಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?
ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!