ಪ್ರಧಾನಿಗೆ ಮುಖವಾಡ ಕಳಚುವ ಭೀತಿ : ರಾಹುಲ್ ಗಾಂಧಿ

By Suvarna Web DeskFirst Published Dec 14, 2016, 11:12 AM IST
Highlights

ಅಧಿವೇಶನ ಆರಂಭವಾದ ದಿನದಿಂದಲೇ ಪ್ರತಿಪಕ್ಷಗಳು ನೋಟು ಅಮಾನ್ಯ ಕ್ರಮವನ್ನು ಚರ್ಚಿಸಲು ಬಯಸತ್ತಿವೆ. ಆದರೆ ಸರ್ಕಾರ ಅದಕ್ಕೆ ತಯಾರಿಲ್ಲ. ಪ್ರಧಾನಿ ಮೋದಿ ವೈಯುಕ್ತಿಕವಾಗಿ ನೋಟು ನಿಷೇಧ ಕ್ರಮವನ್ನು ಕೈಗೊಂಡಿರುವುದರಿಂದ ಅವರು ಖುದ್ದಾಗಿ ಬಂದು ವಿವರಣೆ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿ (ಡಿ.14): ಪ್ರಧಾನಿ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತಾನೆಸಗಿದ ಹಗರಣಗಳು ಬಹಿರಂಗವಾಗುವ ಬಗ್ಗೆ ಮೋದಿ ಭಯಭೀತರಾಗಿದ್ದಾರೆ ಎಂದಿದ್ದಾರೆ.

ಪ್ರಧಾನಿ ಮೋದಿಯವರ ಮುಖವಾಡ ಕಳಚುವಂತಹ ಮಾಹಿತಿ ನನ್ನ ಬಳಿ ಇದೆ. ಲೋಕಸಭೆಯಲ್ಲಿ ನಾನದನ್ನು ಬಹಿರಂಗಪಡಿಸುತ್ತೇನೆಂದು ಅವರು ಭಯಭೀತರಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಂಸತ್ತಿನಲ್ಲಿ ಚರ್ಚೆಗಾಗಿ ಪ್ರತಿಪಕ್ಷಗಳು ಸಿದ್ಧವಾಗಿವೆ ಎಂದು ಪುನರುಚ್ಛರಿಸಿರುವ ರಾಹುಲ್ ಗಾಂಧಿ, ಸರ್ಕಾರ ಚರ್ಚೆ ನಡೆಸಲು ಬಯಸುತ್ತಿಲ್ಲವೆಂದಿದ್ದಾರೆ.

ಅಧಿವೇಶನ ಆರಂಭವಾದ ದಿನದಿಂದಲೇ ಪ್ರತಿಪಕ್ಷಗಳು ನೋಟು ಅಮಾನ್ಯ ಕ್ರಮವನ್ನು ಚರ್ಚಿಸಲು ಬಯಸತ್ತಿವೆ. ಆದರೆ ಸರ್ಕಾರ ಅದಕ್ಕೆ ತಯಾರಿಲ್ಲ. ಪ್ರಧಾನಿ ಮೋದಿ ವೈಯುಕ್ತಿಕವಾಗಿ ನೋಟು ನಿಷೇಧ ಕ್ರಮವನ್ನು ಕೈಗೊಂಡಿರುವುದರಿಂದ ಅವರು ಖುದ್ದಾಗಿ ಬಂದು ವಿವರಣೆ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅನಂತ್ ಕುಮಾರ್ ತಿರುಗೇಟು:

ರಾಹುಲ್ ಗಾಂಧಿ ಹೇಳಿಕೆಯು ಹತಾಶೆಯ ಪ್ರತೀಕವೆಂದು ಕೇಂದ್ರ ಸಚಿವ ಅನಂತ್ ಕುಮಾರ್ ತಿರುಗೇಟು ನೀಡಿದ್ದಾರೆ.

ಜಗತ್ತಿನ ಮುಂದೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯವರ ಮುಖವಾಡ ಈಗಾಗಲೇ ಕಳಚಿಬಿದ್ದಿದೆ. ಈಗ ಹತಾಶೆಯಿಂದ ಅವರು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಅನಂತ್ ಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

click me!