ಏಷಿಯನ್ ಶೃಂಗಸಭೆಗೆ ಮೋದಿ; ನಾಳೆ ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ

Published : Nov 12, 2017, 08:24 PM ISTUpdated : Apr 11, 2018, 12:36 PM IST
ಏಷಿಯನ್ ಶೃಂಗಸಭೆಗೆ ಮೋದಿ; ನಾಳೆ ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ

ಸಾರಾಂಶ

ನರೇಂದ್ರ ಮೋದಿ ಇಂದಿನಿಂದ ಮೂರು ದಿನ ಫಿಲಿಫೈನ್ಸ್​ ಪ್ರವಾಸ ಕೈಗೊಂಡಿದ್ದಾರೆ. 12ನೇ ಏಷಿಯನ್​ ಶೃಂಗ ಸಭೆಯಲ್ಲಿ  ಮೋದಿ ಪಾಲ್ಗೊಳ್ಳುತ್ತಿದ್ದಾರೆ. 

ನವದೆಹಲಿ(ನ.12): ನರೇಂದ್ರ ಮೋದಿ ಇಂದಿನಿಂದ ಮೂರು ದಿನ ಫಿಲಿಫೈನ್ಸ್​ ಪ್ರವಾಸ ಕೈಗೊಂಡಿದ್ದಾರೆ. 12ನೇ ಏಷಿಯನ್​ ಶೃಂಗ ಸಭೆಯಲ್ಲಿ  ಮೋದಿ ಪಾಲ್ಗೊಳ್ಳುತ್ತಿದ್ದಾರೆ. 

ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಲು ತಾವು ಫಿಲಿಫೈನ್ಸ್ ಗೆ ಭೇಟಿ ನೀಡುತ್ತಿರುವುದು ಆಸಿಯಾನ್ ರಾಷ್ಟ್ರಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಬದ್ಧತೆಯನ್ನು ತೋರಿಸುತ್ತಿದೆ ಎಂದು ಫಿಲಿಫೈನ್ಸ್ ಗೆ ತೆರಳುವ ಮುನ್ನವೇ ಪ್ರಧಾನಿ ಹೇಳಿಕೊಂಡಿದ್ದಾರೆ.  ಮೂರು ದಿನಗಳ ಭೇಟಿಯಲ್ಲಿ  ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸುವುದರ ಹೊರತಾಗಿ ಆಸಿಯಾನ್ ಶೃಂಗಸಭೆಯ 50ನೇ ವಾರ್ಷಿಕೋತ್ಸವದಲ್ಲಿ, ಸ್ಥಳೀಯ ಸಮಗ್ರ ಆರ್ಥಿಕ ಸಹಭಾಗಿತ್ವ  ನಾಯಕರ ಸಭೆಯಲ್ಲಿ ಮತ್ತು ಆಸಿಯಾನ್ ಆರ್ಥಿಕ ಮತ್ತು ಹೂಡಿಕೆ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?