ಝಾಕಿರ್ ಗಡಿಪಾರಿಗೆ ಮೋದಿ ಕೋರಿಲ್ಲ; ಮಲೇಷ್ಯಾ ಪ್ರಧಾನಿ; ಇದು ಸುಳ್ಳು: ಸಚಿವ ಜೈಶಂಕರ್| ಮಲೇಷ್ಯಾದ ರೇಡಿಯೋ ಚಾನೆಲ್‌ಗೆ ನೀಡಿರುವ ಸಂರ್ದಶನದಲ್ಲಿ ಮಾತು!
ಕೌಲಾಲಂಪುರ[ಸೆ.18]: ವಿವಾದಿತ ಇಸ್ಲಾಂ ಧರ್ಮಪ್ರಚಾರಕ ಝಾಕಿರ್ ನಾಯ್‌್ಕನನ್ನು ಗಡಿಪಾರು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಕೋರಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹಥೀರ್ ಮೊಹಮ್ಮದ್ ಹೇಳಿದ್ದಾರೆ.
ಮಲೇಷ್ಯಾದ ರೇಡಿಯೋ ಚಾನೆಲ್‌ಗೆ ನೀಡಿರುವ ಸಂರ್ದಶನದಲ್ಲಿ ಈ ಮಾತನ್ನಾಡಿರುವ ಮಹಥೀರ್, ಝಾಕಿರ್ ಯಾರಿಗೂ ಬೇಕಾಗಿಲ್ಲ. ಆತನನ್ನು ಭಾರತಕ್ಕೆ ಗಡಿಪಾರು ಮಾಡಿದರೆ ಭಾರತಕ್ಕೂ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಆತನನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಮಲೇಷ್ಯಾ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಆದರೆ ಮಹಥೀರ್ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವ ಜೈಶಂಕರ್ ತಳ್ಳಿಹಾಕಿದ್ದಾರೆ. ರಷ್ಯಾದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರ ವೇಳೆ ಮೋದಿ ಮತ್ತು ಮಹಥೀರ್ ಭೇಟಿಯಾದಾಗ, ಝಾಕಿರ್ ವಿಷಯ ಪ್ರಸ್ತಾಪವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.