
ಬನಾಸ್ಕಾಂತ್, ಗುಜರಾತ್: ದ್ವಿತೀಯ ಹಾಗೂ ಅಂತಿಮ ಹಂತದ ಚುನಾವಣೆಗೆ ಗುಜರಾತ್ ಸಿದ್ಧಗೊಳ್ಳುತ್ತಿದ್ದಂತೆ, ಹೊಸಹೊಸ ಆರೋಪಗಳು ಕೇಳಲಾರಂಭಿಸಿವೆ. ಪ್ರಧಾನಿ ಮೋದಿ ಅವರ ಮೈಬಣ್ಣ ಬಿಳಿಯಾಗಲು ತೈವಾನ್’ನಿಂದ ಕೋಟ್ಯಾಂತರ ರೂ. ವೆಚ್ಚದಲ್ಲಿ ತರಿಸುವ ಅಣಬೆಗಳು ಕಾರಣವೆಂದು ಯುವ ನಾಯಕ ಅಲ್ಪೇಶ್ ಠಾಕೂರ್ ಆರೋಪಿಸಿದ್ದಾರೆ.
ವಡಾಗಾಂವ್ ಎಂಬಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಲ್ಪೇಶ್ ಠಾಕೂರ್, ಮೋದಿಯವರು ತಿನ್ನುವ ಆಹಾರವನ್ನು ಬಡವರು ತಿನ್ನುವಂತಿಲ್ಲ; ಏಕೆಂದರೆ ಅವರು ತಿನ್ನುವ ಅಣಬೆಗಳು ತೈವಾನ್’ನಿಂದ ತರಿಸಲಾಗುತ್ತದೆ. ಆ ಒಂದು ಅಣಬೆಯ ಬೆಲೆಯು ರೂ. 80000 ಆಗಿದೆ ಎಂದು ಅವರು ಹೇಳಿದ್ದಾರೆ.
ದಿನಕ್ಕೆ ಅಂತಹ 5 ಅಣಬೆಗಳನ್ನು ಮೋದಿ ತಿನ್ನುತ್ತಾರೆ. ಆದುದರಿಂದ ನನ್ನಂತೆ ಕಪ್ಪು ಬಣ್ಣ ಹೊಂದಿದ್ದ ಅವರೀಗ ಬಿಳಿಯಾಗಿದ್ದಾರೆ, ಎಂದು ಅಲ್ಪೇಶ್ ಠಾಕೂರ್ ಹೇಳಿದ್ದಾರೆ.
ಅವರು ಮುಖ್ಯಮಂತ್ರಿಯಾದ ದಿನದಿಂದಲೇ ಅದನ್ನು ತಿನ್ನುತ್ತಿದ್ದಾರೆ. ತಿಂಗಳಿಗೆ ರೂ. 1.20 ಕೋಟಿಯ ಅಣಬೆಗಳನ್ನು ಅವರು ತಿನ್ನುತ್ತಾರಾದರೆ, ಅವರ ಕೆಲಸದವರು ಎಷ್ಟು ಹಣವನ್ನು ತಿನ್ನುತ್ತಿರಬಹುದು? ಎಂದು ಠಾಕೂರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.