ಇಂಡೋನೇಷ್ಯಾ ಪ್ರಜೆಗಳಿಗೆ 30 ದಿನಗಳ ಉಚಿತ ವಿಸಾ ರಹಿತ ಪ್ರವಾಸ

Published : May 30, 2018, 09:19 PM ISTUpdated : May 30, 2018, 09:20 PM IST
ಇಂಡೋನೇಷ್ಯಾ  ಪ್ರಜೆಗಳಿಗೆ 30 ದಿನಗಳ ಉಚಿತ ವಿಸಾ ರಹಿತ ಪ್ರವಾಸ

ಸಾರಾಂಶ

ಜಕಾರ್ತಾ ಕನ್ವೆಷನ್ ಸೆಂಟರ್'ನಲ್ಲಿ ಭಾರತೀಯ ಮೂಲದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು,ಎರಡೂ ದೇಶಗಳಲ್ಲಿ ಹೆಸರಿನಲ್ಲಿ ಮಾತ್ರ ಸಾಮ್ಯತೆಯಿರದೆ ಸ್ನೇಹ - ಬಂಧತ್ವದಲ್ಲೂ ಹೆಚ್ಚು ಅನನ್ಯತೆಯಿದೆ. ಬಹುತೇಕರು ನೀವು ಭಾರತಕ್ಕೆ ಆಗಮಿಸಿಲ್ಲ. 

ಜಕಾರ್ತಾ(ಮೇ.30): ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದ  ಇಂಡೋನೇಷ್ಯಾ  ಪ್ರಜೆಗಳಿಗೆ ನವಭಾರತ ನಿರ್ಮಾಣದ ಅನುಭವನ್ನು ಪಡೆದುಕೊಳ್ಳಲು 30 ದಿನಗಳ ಉಚಿತ ವಿಸಾ ರಹಿತ ಪ್ರವಾಸ ಸೌಲಭ್ಯವನ್ನು ಘೋಷಿಸಿದ್ದಾರೆ.
ಜಕಾರ್ತಾ ಕನ್ವೆಷನ್ ಸೆಂಟರ್'ನಲ್ಲಿ ಭಾರತೀಯ ಮೂಲದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು,ಎರಡೂ ದೇಶಗಳಲ್ಲಿ ಹೆಸರಿನಲ್ಲಿ ಮಾತ್ರ ಸಾಮ್ಯತೆಯಿರದೆ ಸ್ನೇಹ - ಬಂಧತ್ವದಲ್ಲೂ ಹೆಚ್ಚು ಅನನ್ಯತೆಯಿದೆ. ಬಹುತೇಕರು ನೀವು ಭಾರತಕ್ಕೆ ಆಗಮಿಸಿಲ್ಲ. ನಿಮ್ಮೆಲ್ಲರನ್ನು ಮುಂದಿನ ವರ್ಷ ಅಲಹಾಬಾದ್'ನಲ್ಲಿ ನಡೆಯುವ ಕುಂಬ ಮೇಳಕ್ಕೆ ನಾನು ಆಹ್ವಾನಿಸುತ್ತಿದ್ದು, ಭೂಮಿಯ ಮೇಲೆ ನಡೆಯುವ ಅತೀ ದೊಡ್ಡ ಮಾನವ ಜಾತ್ರೆಯಲ್ಲಿ ಪಾಲ್ಗೊಂಡು ಭಾರತದ ಪಾರಂಪರಿಕ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಿರಿ ಎಂದರು.
ನಾನು ಇಲ್ಲಿನ ಭಾರತೀಯ ಸಮುದಾಯವನ್ನು ಮನವಿ ಮಾಡುಕೊಳ್ಳುವುದೇನೆಂದರೆ ನೀವು ಭಾರತಕ್ಕೆ ಭೇಟಿ ನೀಡಿ ಬದಲಾಗುತ್ತಿರುವ ನವಭಾರತ ಅನುಭವವನ್ನು ಖುದ್ದಾಗಿ ತಿಳಿದುಕೊಳ್ಳಿ ಎಂದು ತಿಳಿಸಿದರು.
21ನೇ ಶತಮಾನದಲ್ಲಿ ವಿಶ್ವಮಟ್ಟದಲ್ಲಿ ಭಾರತ ಪ್ರಜ್ವಲಿಸಲು ನಮ್ಮ ಸರ್ಕಾರ ಎಲ್ಲ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. 2022ರ ವೇಳೆಗೆ  ಭಾರತ ಸ್ವಾತಂತ್ರಗೊಂಡು 75 ವರ್ಷ ಪೂರ್ಣಗೊಳಿಸಲಿದ್ದು ಅಷ್ಟರೊಳಗೆ ನವನಿರ್ಮಾಣದತ್ತ ಸಾಗುವುದು ಖಂಡಿತ ಎಂದು ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ