ಹೀಗಿದೆ ಅಟಲ್ 100 ರೂ. ನಾಣ್ಯ: ಸಿಕ್ರೆ ಅದೇ ಪುಣ್ಯ!

By Web DeskFirst Published Dec 24, 2018, 1:15 PM IST
Highlights

ಬಿಡುಗಡೆಯಾಯ್ತು ಅಟಲ್ ಸ್ಮರಣಾರ್ಥ 100 ರೂ. ನಾಣ್ಯ| ನವದೆಹಲಿಯಲ್ಲಿ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ| ಅಟಲ್ ಭಾವಚಿತ್ರ ಇರುವ 100 ರೂ. ಮುಖಬೆಲೆಯ ನಾಣ್ಯ| ಅಡ್ವಾಣಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಭಾಗಿ

ನವದೆಹಲಿ(ಡಿ.24): ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ (ಡಿ.25)94ನೇ ಜನ್ಮ ದಿನದ ಅಂಗವಾಗಿ ಅವರ ಸ್ಮರಣಾರ್ಥ 100 ರೂ. ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ಸ್ಪೀಕರ್ ಸುಮಿತ್ರಾ ಮಹಾಜನ್, ವಿತ್ತ ಸಚಿವ ಅರುಣ್ ಜೇಟ್ಲಿ, ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ  ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Prime Minister Narendra Modi releases commemorative Rs 100 coin in memory of former prime minister Atal Bihari Vajpayee. pic.twitter.com/wE1KHYgEsZ

— ANI (@ANI)

ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ನರೇಂದ್ರ ಮೋದಿ, ಅಟಲ್  ಬಿಹಾರಿ ವಾಜಪೇಯಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದ್ದರು. ಇದೇ ಕಾರಣಕ್ಕೆ ಭಾರತದ ರಾಜಕಾರಣದಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯಲಿದೆ ಎಂದು ಹೇಳಿದರು.

PM Modi at the release of a commemorative coin in memory of former PM AB Vajpayee: Today political scenario is such that if one has to stay out of power for 2-5 yrs, one gets restless. Atal Ji sat in opposition & didn't stop raising his voice for the people? pic.twitter.com/eqYG8DCNUE

— ANI (@ANI)

ವಾಜಪೇಯಿ ಅವರ ತತ್ವ ಆದರ್ಶಗಳನ್ನು ಪಾಲಿಸುವುದಾಗಿ ಹೇಳಿದ ಮೋದಿ, ಅವರು ಕಟ್ಟಿದ್ದ ಬಿಜೆಪಿ ಇಂದು ದೊಡ್ಡ ರಾಜಕೀಯ ಪಕ್ಷವಾಗಿ ಬೆಳದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹಂಚಿ ಮಿಠಾಯಿ: 100 ರೂ. ನಾಣ್ಯದ ಮೇಲೆ ವಾಜಪೇಯಿ!

click me!