ಸಂಘ ಪರಿವಾರ ನಾಯಕರ ಹತ್ಯೆಗೆ ಸಂಚು: ಪೊಲೀಸ್ ಇಲಾಖೆ ಬಹಿರಂಗ..!

By Web Desk  |  First Published Jan 10, 2019, 4:14 PM IST

ಆರ್‌ಎಸ್‌ಎಸ್‌ ಸಂಘ ಪರಿವಾರದ ನಾಯಕರ ಹತ್ಯೆಗೆ ದುಷ್ಕರ್ಮಿಗಳು ವಿದೇಶದಿಂದ ವ್ಯವಸ್ಥಿತವಾಗಿ ಸಂಚು ಮಾಡಿದ್ದಾರೆಂಬ ಆಘಾತಕಾರಿ ಮಾಹಿತಿಯನ್ನು ಪೊಲೀಸ್ ಇಲಾಖೆ ಬಹಿರಂಗೊಳಿಸಿದೆ. ಯಾರು ಹಿಂದೂ ಮುಖಂಡರು..?


ಬೆಂಗಳೂರು, (ಜ.10): ರಾಜ್ಯದ ಆರ್‌ಎಸ್‌ಎಸ್‌ ಸಂಘ ಪರಿವಾರದ ನಾಯಕರ ಹತ್ಯೆಗೆ ದುಷ್ಕರ್ಮಿಗಳು ವ್ಯವಸ್ಥಿತ ಸಂಚು ರೂಪಿಸಿದ್ದಾರೆಂದು ಆಘಾತಕಾರಿ ಮಾಹಿತಿಯನ್ನು ಪೊಲೀಸ್ ಇಲಾಖೆ ಹೊರಹಾಕಿದೆ.

ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಮುಖಂಡರಾಗಿರುವ ಶರಣ್ ಪಂಪ್ ವೆಲ್ ಹಾಗೂ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹತ್ಯೆಗೆ ದುಷ್ಕರ್ಮಿಗಳ ಸಂಚು ರೂಪಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

Tap to resize

Latest Videos

ವಿದೇಶದಲ್ಲಿ ಕುಳಿತು ಕಲ್ಲಡ್ಕ ಪ್ರಭಾಕರ್ ಭಟ್ ಕೊಲೆಗೆ ಸಂಚಿನ ರೂಪಿಸಲಾಗುತ್ತಿದೆ. ಇದ್ರಿಂದ ಅವರು ಎಚ್ಚರವಾಗಿರಲು ಪ್ರಭಾಕರ್ ಭಟ್  ಅವರಿಗೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಭಾಕರ್ ಭಟ್,  ಯಾರೋ ದುಷ್ಕರ್ಮಿಗಳು ನನ್ನ ಕೊಲೆ ಸಂಚು ರೂಪಿಸುತ್ತಿದ್ದಾರೆಂದು ಮಾಹಿತಿ ತಿಳಿದುಬಂದಿದ್ದು, ಪೊಲೀಸ್ ಇಲಾಖೆ ಅಧಿಕಾರಿಗಳಿಂದ ಈ ವಿಚಾರ ಗೊತ್ತಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಗ್ರಾಮದಲ್ಲಿ ವಾಸವಿದ್ದ ಭಟ್ ಕೊಲೆ ಬೆದರಿಕೆ ಹಿನ್ನಲೆಯಲ್ಲಿ ಬೇರೆ ಸ್ಥಳಕ್ಕೆ ತೆರಳುವುದಾಗಿ ತಿಳಿಸಿದ್ದಾರೆ.

click me!