ಸಿಧುಗೆ ಜೀವ ಬೆದರಿಕೆ: Z Plus ಸೆಕ್ಯೂರಿಟಿ ನೀಡಿದ ಮೋದಿ ಸರ್ಕಾರ

By Web DeskFirst Published Jan 10, 2019, 4:07 PM IST
Highlights

ಕಾಂಗ್ರೆಸ್ ಪಕ್ಷದ ನಾಯಕ ನವಜೋತ್ ಸಿಂಗ್ ಸಿಧುಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸದ್ಯ ಕೇಂದ್ರ ಸರ್ಕಾರ ಸಿಧು ಭದ್ರತೆಯನ್ನು ಹೆಚ್ಚಿಸಿದೆ.

ಚಂಡೀಗಡ್[ಜ.10]: ಪಂಜಾಬ್ ಸರ್ಕಾರದ ಸಂಪುಟ ಸಚಿವ ನವಜೋತ್ ಸಿಂಗ್ ಸಿಧುರವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸುದ್ದಿ ಸಂಸ್ಥೆ PTI ಈ ಕುರಿತಾಗಿ ವರದಿ ಪ್ರಕಟಿಸಿದ್ದು, ಸಿಧುರವರಿಗೆ ಬರುತ್ತಿರುವ ಜೀವ ಬೆದರಿಕೆಗಳಿಂದ ಭದ್ರತೆ ಹೆಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ರಾಜ್ಯ ಸರ್ಕಾರವೂ ಅವರ ಭದ್ರತೆಗಾಗಿ ಬುಲೆಟ್ ಪ್ರೂಫ್ ಕ್ರೂಜರ್ ನೀಡಿದೆ ಎಂದು ಸಿಧು ಆಪ್ತ ಮೂಲಗಳಿಂದ ತಿಳಿದು ಬಂದಿದೆ. 

ಪ್ರಧಾನಿ ಮೋದಿ ನಾಯಿಯೂ ಸುಳ್ಳು ಹೇಳುತ್ತೆ: ಸಿಧು

2018ರಲ್ಲಿ ಕಾಂಗ್ರೆಸ್ ಪಕ್ಷವು ಸಿದೂ ಜೀವಕ್ಕೆ ಅಪಾಯವಿದೆ ಎಂಬ ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೇ, ಅವರಿಗೆ CISF ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿತ್ತು. ಕಾಂಗ್ರೆಸ್ ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಈ ಕುರಿತಾಗಿ ಕೆಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ರಿಗೆ ಪತ್ರ ಬರೆದು, ಸಿಧು ಪಕ್ಷದ ಪರವಾಗಿ ಬೇರೆ ರಾಜ್ಯಗಳಲ್ಲೂ ಪ್ರಚಾರ ನಡೆಸುತ್ತಿರುವುದರಿಂದ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದ್ದರು. 

ವೈರಿ ರಾಷ್ಟ್ರದ ಪರ ಮಾತನಾಡುವ ಸಿಧುಗೆ ಪಾಕಿಸ್ತಾನದಿಂದ ಬಂಪರ್ ಆಫರ್ !

ಸದ್ಯ ನವಜ್ಯೋತ್ ಸಿಧು ಭದ್ರತೆ ಹೆಚ್ಚಿಸಿ ಝಡ್ ಪ್ಲಸ್ ಸೆಕ್ಯೂರಿಟಿ ನೀಡಲಾಗಿದೆ. ಸಿಧು ಭದ್ರತೆಗಾಗಿ ಈ ಹಿಂದೆ ಇದ್ದ 12 ಮಂದಿ ಸಿಬ್ಬಂದಿ ಸಂಖ್ಯೆಯನ್ನು 25ಕ್ಕೇರಿಸಲಾಗಿದೆ. ಸಿಧುಗೆ ಕೇವಲ ರಾಜಕೀಯ ಪ್ರೇರಿತ ಜೀವ ಬೆದರಿಕೆಗಳು ಮಾತ್ರವಲ್ಲದೇ, ಡ್ರಗ್ಸ್, ಮೈನಿಂಗ್ ಹಾಗೂ ಮಾಫಿಯಾ ಕ್ಷೇತ್ರದಿಂದಲೂ ಬೆದರಿಕೆಗಳು ಬಂದಿವೆ ಎನ್ನಲಾಗಿದೆ.

click me!