ಐಪಿಎಲ್: ನಾಳೆ ಆಟಗಾರರ ರೀಟೈನ್ ಪಟ್ಟಿ ಪ್ರಕಟ; ಸ್ಟಾರ್ ಸ್ಪೋರ್ಟ್ಸ್'ನಲ್ಲಿ ನೇರ ಪ್ರಸಾರ

By Suvarna Web DeskFirst Published Jan 3, 2018, 12:37 PM IST
Highlights

ಪ್ರತಿ ತಂಡಕ್ಕೂ ಈ ಬಾರಿ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ರೀಟೈನ್ ನಿಯಮದಂತೆ ಹರಾಜಿಗೂ ಮುನ್ನ ಗರಿಷ್ಠ 3 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ತಿಂಗಳಂತ್ಯದಲ್ಲಿ ಬೆಂಗಳೂರಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ‘ರೈಟ್ ಟು ಮ್ಯಾಚ್ ಕಾರ್ಡ್’ ಬಳಸಿ 2 ಆಟಗಾರರನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳಬಹುದಾಗಿದೆ.

ಮುಂಬೈ(ಜ.03): ಇದೇ ಮೊದಲ ಬಾರಿಗೆ ಐಪಿಎಲ್ ತಂಡಗಳು ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ನೇರ ಪ್ರಸಾರದಲ್ಲಿ ಪ್ರಕಟಿಸಲಿವೆ. ಗುರುವಾರ (ಜ.4)ರಂದು ನಡೆಯಲಿರುವ ರೀಟೈನ್ ಪಟ್ಟಿ ಪ್ರಕಟಕ್ಕಾಗಿ ಬಿಸಿಸಿಐ ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಸ್ಟಾರ್ ಸ್ಪೋರ್ಟ್ಸ್'ನಲ್ಲಿ ನೇರ ಪ್ರಸಾರವಾಗಲಿದೆ.

ಗುರುವಾರ ಸಂಜೆ ಕಾರ್ಯಕ್ರಮ ನಿಗದಿಯಾಗಿದ್ದು, ತಂಡದ ಮಾಲೀಕರು ಖುದ್ದು ಹಾಜರಾಗಿ ತಾವು ಉಳಿಸಿಕೊಳ್ಳಲು ನಿರ್ಧರಿಸಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲಿದ್ದಾರೆ. ಲಭ್ಯವಿದ್ದರೆ ಆಟಗಾರರನ್ನೂ ಕರೆತರಲು ಸೂಚಿಸಲಾಗಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಮಾಲೀಕರು, ಇ-ಮೇಲ್ ಮೂಲಕ ಬಿಸಿಸಿಐಗೆ ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಕಳುಹಿಸುತ್ತಿದ್ದರು.

ಪ್ರತಿ ತಂಡಕ್ಕೂ ಈ ಬಾರಿ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ರೀಟೈನ್ ನಿಯಮದಂತೆ ಹರಾಜಿಗೂ ಮುನ್ನ ಗರಿಷ್ಠ 3 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ತಿಂಗಳಂತ್ಯದಲ್ಲಿ ಬೆಂಗಳೂರಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ‘ರೈಟ್ ಟು ಮ್ಯಾಚ್ ಕಾರ್ಡ್’ ಬಳಸಿ 2 ಆಟಗಾರರನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳಬಹುದಾಗಿದೆ. ಒಂದೊಮ್ಮೆ ಹರಾಜಿಗೂ ಮುನ್ನ ಇಬ್ಬರು ಇಲ್ಲವೇ ಒಬ್ಬ ಆಟಗಾರನನ್ನು ಉಳಿಸಿಕೊಂಡರೆ, ಹರಾಜಿನಲ್ಲಿ ಗರಿಷ್ಠ 3 ರೈಟ್ ಟು ಮ್ಯಾಚ್ ಕಾರ್ಡ್ ಬಳಕೆಗೆ ಅವಕಾಶವಿದೆ.

ರೀಟೈನ್ ಪ್ರಕ್ರಿಯೆ ವೇಳಾಪಟ್ಟಿ: ಜ.4ರ ಸಂಜೆ 6.50ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2

click me!