
ಕಲಬುರ್ಗಿ: ಪ್ಲಾಸ್ಟಿಕ್ ಅಕ್ಕಿ, ಕ್ಯಾಬೇಜ್ ಆಯ್ತು, ಇದೀಗ ಪ್ಲಾಸ್ಟಿಕ್ ತತ್ತಿ ಸರದಿ. ಕಲಬುರಗಿ ಮಾರುಕಟ್ಟೆಯಲ್ಲಿ ಕೃತಕ ಮೊಟ್ಟೆ ಮಾರಾಟವಾಗುತ್ತಿರುವ ವಿಚಾರ ಇದೀಗ ಪ್ರಯೋಗದಿಂದ ದೃಢಪಟ್ಟಿದೆ. ಈ ರೀತಿಯ ಮೊಟ್ಟೆಗಳು ಕೊಲ್ಕತಾ ದಲ್ಲಿ ಮಾರಾಟವಾಗುತ್ತಿರುವ ಕುರಿತು ವರದಿಯಾಗಿತ್ತು. ಕರ್ನಾಟಕದಲ್ಲೇ ಈ ರೀತಿಯ ಮೊಟ್ಟೆಮಾರಾಟ ವಿಚಾರ ಇದೇ ಮೊದಲ ಸಲ ಬಹಿರಂಗವಾಗಿದೆ. ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಕಲಬುರಗಿ ಜಿಲ್ಲಾ ಸಮಿತಿ, ಗುಲ್ಬರ್ಗಾ ವಿವಿ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳ ತಂಡ ಈ ಶೋಧ ನಡೆಸಿದೆ. ಅವರಿಂದಾಗಿ ಈ
ಕೃತಕ ಮೊಟ್ಟೆಗಳು ಜಿಲ್ಲೆಯಲ್ಲಿ ಮಾರಾಟ ಆಗುತ್ತಿರುವ ಸತ್ಯ ಬೆಳಕಿಗೆ ಬಂದಿದೆ. ಕಲಬುರಗಿಯ ಸ್ಥಳೀಯ ಮಾರುಕಟ್ಟೆಯಿಂದಲೇ ಮೊಟ್ಟೆಗಳನ್ನು ಖರೀದಿಸಿ ತಂದು ವಿದ್ಯಾರ್ಥಿಗಳು ಈ ಸಂಶೋಧನೆ ನಡೆಸಿದ್ದಾರೆ.
ವ್ಯತ್ಯಾಸವೇ ಗೊತ್ತಾಗಲ್ಲ: ಕೋಳಿ ಮೊಟ್ಟೆಯಲ್ಲಿರುವ ಆಲ್ಬುಮಿನ್(ಬಿಳಿ ಪದಾರ್ಥ) ಈ ಕೃತಕ ಮೊಟ್ಟೆಯಲ್ಲಿ ಇಲ್ಲ. ಅದರ ಬದಲು ಕೃತಕವಾಗಿ ತಯಾರಿಸಲಾಗುವ ಜಿಲೆಟಿನ್ ಹಾಗೂ ಸೋಡಿಯಂ ಆಲ್ಜಿನೆಟ್ ರಾಸಾಯನಿಕಗಳನ್ನು ಬಳಸಲಾಗುತ್ತದೆ. ನೋಡಲು ಮಾಮೂಲಿ ಮೊಟ್ಟೆಯಂತೆಯೇ ಕಾಣುವ ಇವುಗಳ ಗಾತ್ರ ಹಾಗೂ ಬಣ್ಣದಲ್ಲೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ, ಈ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ.
ಪ್ಲಾಸ್ಟಿಕ್ ಮೊಟ್ಟೆಗುರುತಿಸೋದು ಹೀಗೆ:
* ನಿಜವಾದ ಮೊಟ್ಟೆನೀರಿನಲ್ಲಿ ಮುಳುಗಿದರೆ, ಕೃತಕ ಕೊಳೆತ ಮೊಟ್ಟೆಯ ರೀತಿ ನೀರಿನಲ್ಲಿ ತೇಲುತ್ತದೆ.
* ಒಡೆದಿಲ್ಲದಿದ್ದರೆ ಕೋಳಿ ಮೊಟ್ಟೆಯ ಹಳದಿ ಭಾಗ ಬಿಳಿಯ ಭಾಗದೊಂದಿಗೆ ಬೆರೆಯದೆ ಪ್ರತ್ಯೇಕವಾಗಿರುತ್ತದೆ. ಆದರೆ ಕೃತಕ ಮೊಟ್ಟೆಒಡೆಯುತ್ತಿದ್ದಂತೆ ಬಿಳಿಯ ಭಾಗದೊಂದಿಗೆ ಹಳದಿ ಭಾಗ ಬೆರೆತು ಹೋಗುತ್ತದೆ.
* ಕೃತಕ ಮೊಟ್ಟೆಗೆ ಹೋಲಿಸಿದರೆ ಸಾಮಾನ್ಯ ಮೊಟ್ಟೆಯಲ್ಲಿ ಬಿಳಿಯ ಭಾಗವನ್ನು ರಕ್ಷಿಸುವ ಪದರ ದಪ್ಪವಾಗಿರುತ್ತದೆ.
* ಬೇಯಿಸಿದಾಗ ಈ ಮೊಟ್ಟೆಮಾಮೂಲಿ ಮೊಟ್ಟೆಯಂತೆ ಕಂಡರೂ, ರುಚಿಯಲ್ಲಿ ವ್ಯತ್ಯಾಸವಿರುತ್ತದೆ.
ಜಿಲ್ಲಾಡಳಿತ ಕೂಡಲೇ ಈ ವಿಷಯದ ಬಗ್ಗೆ ಗಮನಹರಿಸಿ ಕೃತಕ ಮೊಟ್ಟೆಗಳ ಮಾರಾಟದ ಮೇಲೆ ನಿರ್ಬಂಧ ಹೇರಬೇಕು ಹಾಗೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಕಲಬುರಗಿ ಸೇರಿ ಇನ್ನೂ ಎಲ್ಲೆಲ್ಲಿ ಇಂತಹ ಅಪಾಯಕಾರಿ ಪ್ಲಾಸ್ಟಿಕ್ ಮೊಟ್ಟೆಮಾರಾಟ ಸಾಗಿದೆ ಎಂಬುದನ್ನು ಗುರುತಿಸಿ ಕ್ರಮಕ್ಕೆ ಮುಂದಾಗಬೇಕು.
- ಅಭಯಾ ದಿವಾಕರ್, ಅಧ್ಯಕ್ಷ, ಬ್ರೆಕ್ ಥ್ರೂ ಸೈನ್ಸ್ ಸೊಸೈಟಿ, ಕಲಬುರಗಿ
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.