(ವಿಡಿಯೋ)ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಕೇಂದ್ರ ಸಚಿವ ಗೋಯಲ್

By Suvaerna Web DeskFirst Published Apr 10, 2017, 9:28 PM IST
Highlights

ವಾರದ 24 ಗಂಟೆಯೂ ಉತ್ತರ ಪ್ರದೇಶದ ಜನತೆಗೆ ವಿದ್ಯುತ್ ಇರಬೇಕು. ಇಲ್ಲವಾದಲ್ಲಿ ನಿಮ್ಮ ರಾಜಿನಾಮೆಯನ್ನೂ ಈಗಲೇ ಕೊಟ್ಟು ಹೊರಡಿ. ಹೀಗಂತ ಖಡಕ್ ಆದೇಶ ನೀಡಿದ್ದು ಯೂನಿಯನ್ ಪವರ್ ಮಿನಿಸ್ಟರ್ ಪೀಯೂಷ್ ಗೋಯಲ್.

ನವದೆಹಲಿ(ಎ.11): ವಾರದ 24 ಗಂಟೆಯೂ ಉತ್ತರ ಪ್ರದೇಶದ ಜನತೆಗೆ ವಿದ್ಯುತ್ ಇರಬೇಕು. ಇಲ್ಲವಾದಲ್ಲಿ ನಿಮ್ಮ ರಾಜಿನಾಮೆಯನ್ನೂ ಈಗಲೇ ಕೊಟ್ಟು ಹೊರಡಿ. ಹೀಗಂತ ಖಡಕ್ ಆದೇಶ ನೀಡಿದ್ದು ಯೂನಿಯನ್ ಪವರ್ ಮಿನಿಸ್ಟರ್ ಪೀಯೂಷ್ ಗೋಯಲ್.

ಪವರ್ ಫಿನಾನ್ಸ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಗೋಯಲ್, ಭ್ರಷ್ಟಾಚಾರ ಮುಕ್ತರಾಗಿ, ಇಲ್ಲವಾದಲ್ಲಿ ನೀವೇ ರಾಜೀನಾಮೆ ನೀಡಿ ಎಂದಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೊಸ ನಿಯಮಗಳಿಗೆ ಹೊಂದಿಕೊಳ್ಳಿ, ನಿಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ, ಅಧಿಕ ವೆಚ್ಚವನ್ನು ಹಿಡಿತದಲ್ಲಿಟ್ಟರೇ ಭ್ರಷ್ಟಾಚಾರ ತಲೆ ದೂರಲ್ಲ. ಈ ಮಾತು ಕೇವಲ ಅಧಿಕಾರಿಗಳಿಗೆ ಹೇಳುತ್ತಿಲ್ಲ. ಲೈನ್​ಮೆನ್, ಇನ್ಸ್ ಪೆಕ್ಟರ್, ಕ್ವಾಲಿಟಿ ಚೆಕ್ಕರ್ಸ್ ಮತ್ತು ಕಂಟ್ರಾಕ್ಟರ್ ಗಳಿಗೂ ಅನ್ವಯವಾಗುತ್ತದೆ. ಈ ನಿಯಮವನ್ನು ವಿದ್ಯುತ್ ಇಲಾಖೆಯ ಪ್ರತಿಯೊಬ್ಬ ಕಾರ್ಮಿಕನು ಪಾಲಿಸಲೇಬೇಕು. ಯಾರಾದರು ಲಂಚಕ್ಕೆ ಕೈ ಚಾಚಿದಲ್ಲಿ ಅಂಥವರ ವಿರುದ್ಧ ಆ ಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಕೇಂದ್ರ ಸಚಿವ ಗೋಯಲ್ ಖಡಕ್ ಆದೇಶ ಮಾಡಿದ್ದಾರೆ.

 

 

 

 

 

 

 

 

 

 

 

 

click me!