ಕಾಲುವೆಗೆ ಉರುಳಿದ ವ್ಯಾನ್: 22 ಮಂದಿ ರಕ್ಷಣೆ, 7 ಮಕ್ಕಳು ನಾಪತ್ತೆ!

By Web DeskFirst Published Jun 20, 2019, 12:41 PM IST
Highlights

ಕಾಲುವೆಗೆ ಉರುಳಿದ ವ್ಯಾನ್| 30 ಪ್ರಯಾಣಿಕರಲ್ಲಿ 22 ಮಂದಿ ರkfxNe, 7 ಮಕ್ಕಳು ನಾಪತ್ತೆ| ಉತ್ತರಪ್ರದೇಶದ ಲಕ್ನೋದಲ್ಲಿ ನಡೆದ ದುರಂತ

ಲಕ್ನೋ(ಜೂ.20): ಮದುವೆ ಸಮಾರಂಭವೊಂದರಿಂದ ಮರಳುತ್ತಿದ್ದ 30 ಮಂದಿಯಿದ್ದ ಪಿಕ್ ಅಪ್ ವಾಹನವೊಂದು ಕಾಲುವೆಗೆ ಉರುಳಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ಕಾಲುವೆಗೆ ಬಿದ್ದಿದ್ದ 22 ಜನರನ್ನು ರಕ್ಷಿಸಲಾಗಿದ್ದು, 7 ಮಕ್ಕಳು ನಾಪತ್ತೆಯಾಗಿದ್ದಾರೆ. 

ಲಕ್ನೋದ ನಗ್ರಂ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ವಾ ಖೇಡಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಈ ವ್ಯಾನ್‍ನಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಸುಮಾರು 30 ಜನರಿದ್ದರು. ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ ಇಂದು ಮುಂಜಾನೆ ಮರಳುತ್ತಿದ್ದಾಗ ಇಂದಿರಾ ಕಾಲುವೆಗೆ ವ್ಯಾನ್ ಉರುಳಿ ಬಿದ್ದಿದೆ. ಘಟನೆಯಲ್ಲಿ 22 ಮಂದಿಯನ್ನು ರಕ್ಷಿಸಲಾಗಿದ್ದು, 7 ಮಕ್ಕಳು ನಾಪತ್ತೆಯಾಗಿದ್ದಾರೆ. ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಕ್ಕಳೆಲ್ಲರೂ ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. 

NDRF ಹಾಗೂ SDRF ರಕ್ಷಣಾ ತಂಡಗಳು ಕಾಲುವೆಯಲ್ಲಿ ಶೋಧ ಮುಂದುವರಿಸಿವೆ. ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

click me!