ಪಿಎಫ್ ಬಡ್ಡಿ ದರ ಶೇ. 8.55 ಕ್ಕೆ ಇಳಿಕೆ: ಚಂದಾದಾರರಿಗೆ ಶಾಕ್!

By Suvarna Web DeskFirst Published Feb 22, 2018, 10:32 AM IST
Highlights

2017-18 ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಬಡ್ಡಿ ದರಗಳನ್ನು  ಪ್ರಕಟಿಸಲಾಗಿದೆ. ಬಡ್ಡಿ ದರವನ್ನು ಶೇ.8.65  ರಿಂದ ಶೇ.8.55 ಕ್ಕೆ ಇಳಿಸಲಾಗಿದ್ದು, ಇದರಿಂದ ಚಂದಾರಾರರು ತೀವ್ರ ನಿರಾಶೆಗೊಳ್ಳುವಂತಾಗಿದೆ.

ನವದೆಹಲಿ (ಫೆ.21): 2017-18 ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಬಡ್ಡಿ ದರಗಳನ್ನು  ಪ್ರಕಟಿಸಲಾಗಿದೆ. ಬಡ್ಡಿ ದರವನ್ನು ಶೇ.8.65  ರಿಂದ ಶೇ.8.55 ಕ್ಕೆ ಇಳಿಸಲಾಗಿದ್ದು, ಇದರಿಂದ ಚಂದಾರಾರರು ತೀವ್ರ ನಿರಾಶೆಗೊಳ್ಳುವಂತಾಗಿದೆ.

2016-17 ರಲ್ಲಿ  ಶೇ.8.65 ಕ್ಕೆ ಪಿಎಫ್ ದರವನ್ನು ನಿಗದಿ ಮಾಡಲಾಗಿತ್ತು ಹಾಗೂ ಅದರ ಹಿಂದಿನ ಸಾಲಿನಲ್ಲಿ ಶೇ.೮.೮ರಷ್ಟು ಪಿಎಫ್ ದರ ಇತ್ತು.  ಆದರೆ ಈಗ ಕ್ರಮೇಣ ಸತತ ೩ ವರ್ಷದಲ್ಲಿ ಬಡ್ಡಿದರವು ಇಳಿಕೆ ಪರ್ವ ಕಂಡಿದ್ದು, ಒಟ್ಟಾರೆಯಾಗಿ ಈ ಅವಧಿಯಲ್ಲಿ ಶೇ. 0.25 ರಷ್ಟು ಕಡಿತವಾಗಿದೆ. ಬಡ್ಡಿದರ ಯಥಾಸ್ಥಿತಿಯಲ್ಲೇ ಮುಂದುವರಿಯಬೇಕು ಎಂಬ ಉದ್ದೇಶದಿಂದ ಈ ಮಾಸದ ಆರಂಭದಲ್ಲಿ  2,886 ಕೋಟಿ ರು. ಮೌಲ್ಯದ ತನ್ನ ಬಂಡವಾಳವನ್ನು   ವಿನಿಮಯ ವ್ಯಾಪಾರ ನಿಧಿಗೆ ಮಾರಾಟ ಕೂಡ ಮಾಡಿತ್ತು. ಆದರೆ ಬುಧವಾರ ಸಭೆ  ಸೇರಿದ್ದ ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್‌ಒ), ಅನಿರೀಕ್ಷಿತವಾಗಿ  ಶೇ.0.10 ರಷ್ಟು ಬಡ್ಡಿದರ ಕಡಿತಗೊಳಿಸಿದೆ. ಬಡ್ಡಿದರ ಇಳಿಕೆಯ ಬಿಸಿ ಸುಮಾರು 5 ಕೋಟಿ ಇಪಿಎಫ್ ಚಂದಾದಾರರಿಗೆ ತಟ್ಟಲಿದೆ. 

click me!