ಚಾಲಕನ ಚಾಲಕಿತನದಿಂದ ತಪ್ಪಿತು ಭಾರಿ ಬೆಂಕಿ ದುರಂತ

By Suvarna Web DeskFirst Published Mar 26, 2018, 10:44 AM IST
Highlights

ಮಧ್ಯ ಪ್ರದೇಶದಲ್ಲಿ ಪೆಟ್ರೋಲ್ ಸಾಗಿರುವ ಟ್ಯಾಂಕರ್’ನಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಚಾಲಕ ತನ್ನ ಚಾಲಕಿತನವನ್ನು ಪ್ರದರ್ಶಿಸಿ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾನೆ.

ಭೋಪಾಲ್ : ಮಧ್ಯ ಪ್ರದೇಶದಲ್ಲಿ ಪೆಟ್ರೋಲ್ ಸಾಗಿರುವ ಟ್ಯಾಂಕರ್’ನಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಚಾಲಕ ತನ್ನ ಚಾಲಕಿತನವನ್ನು ಪ್ರದರ್ಶಿಸಿ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾನೆ.

ಪೆಟ್ರೋಲ್ ಪಂಪ್ ಬಳಿ ಇದ್ದ ಪೆಟ್ರೋಲ್ ಟ್ಯಾಂಕರ್’ನ್ನು  ಬೆಂಕಿ ಕಾಣಿಸಿಕೊಂಡ ತಕ್ಷಣವೆ ದೂರ ತೆಗೆದುಕೊಂಡು ಹೋಗಿದ್ದಾನೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ದೂರ ಚಾಲನೆ ಮಾಡಿಕೊಂಡು ಹೋಗಿದ್ದರಿಂದ ನಡೆಯಬಹುದಾದ ಅನಾಹುತವೊಂದನ್ನು ತಪ್ಪಿಸಿದ್ದಾನೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ತಕ್ಷಣವೇ ಲಾರಿಯನ್ನು ಸ್ಥಳದಿಂದ ಚಾಲನೆ ಮಾಡಿಕೊಂಡು ದೂರ ತೆರಳಿಲ್ಲವೆಂದರೆ ಪೆಟ್ರೋಲ್ ಪಂಪ್ ಹೊತ್ತಿ ಉರಿಯುವ ಸಾಧ್ಯತೆ ಇತ್ತು.

ಮಧ್ಯ ಪ್ರದೇಶದ ಭೋಪಾಲ್’ನಿಂದ ಸುಮಾರು 220 ಕಿ.ಮೀ ದೂರದಲ್ಲಿರುವ  ನರಸಿಂಗ ಪುರದಲ್ಲಿ ಈ ಘಟನೆ ನಡೆದಿದೆ.

 

A petrol tanker caught fire while it was being emptied at a petrol pump in MP's Narsinghpur. In an attempt to save lives, the truck driver drove the burning truck to a location away from the petrol pump. Truck driver suffered burns, admitted to hospital (25 March) pic.twitter.com/YBchJ5YsZh

— ANI (@ANI)
click me!