
ಹೈದರಾಬಾದ್: ಕಳೆದ ವರ್ಷದ ರಾಮನವಮಿ ದಿನ ಈ ಊರಿನ ಹೊರಗೆ ಗ್ರಾಮಸ್ಥರೆಲ್ಲ ಸೇರಿ ‘ಇದು ಹಿಂದುಗಳಷ್ಟೇ ವಾಸಿಸುವ ಹಳ್ಳಿ’ ಬೋರ್ಡ್ ಹಾಕಿದ್ದರು. ಈ ವರ್ಷದ ರಾಮನವಮಿ ದಿನ ‘ಮತಾಂತರ ಮುಕ್ತ 1 ವರ್ಷ’ವನ್ನು ಗ್ರಾಮಸ್ಥರು ಆಚರಿಸುತ್ತಿದ್ದಾರೆ.
ಇದು ಆಂಧ್ರದ ಕಡಪ ಜಿಲ್ಲೆಯ ಕೆಸಲಿಂಗಯಪಲ್ಲಿ ಹಳ್ಳಿಯ ವಿಶೇಷ. ಬಲವಂತದ ಮತಾಂತರಕ್ಕೆ ಬಂದಿದ್ದಾರೆಂದು ಆರೋಪಿಸಿ ಕೆಲವರ ಮೇಲೆ ಗಂಭೀರ ಹಲ್ಲೆಗಳಾಗುತ್ತವೆ. ಆದರೆ, ಆಂಧ್ರದ ಈ ಹಳ್ಳಿಯ ಜನರು ಒಗ್ಗಟ್ಟಿನಿಂದ ಹಾಗೂ ಶಾಂತಿಯುತವಾಗಿ ಮತಾಂತರವನ್ನು ಮೆಟ್ಟಿ ನಿಂತಿದ್ದಾರೆ. ಈಗ ಇದುಹಿಂದುಗಳಿಗೆ ಮಾತ್ರ ಸೇರಿದ ಹಳ್ಳಿ ಎಂದು ಕೇಸರಿ ಬೋರ್ಡ್ ಕೂಡ ಊರಿನ ದ್ವಾರದಲ್ಲಿ ನೆಟ್ಟಿದ್ದಾರೆ.
ಕಳೆದ ವರ್ಷ ಈ ಊರಿನ ಕೆಲವರನ್ನು ಕ್ರಿಶ್ಚಿಯನ್ ಮಿಷನರಿಗಳು ಮತಾಂತರ ಮಾಡಿದ್ದರು. ನಂತರ ಗ್ರಾಮಸ್ಥರು ಅವರನ್ನು ಸ್ಥಳೀಯ ಆಶ್ರಮಕ್ಕೆ ಕರೆದೊಯ್ದು ಸ್ವಾಮಿ ಅಚಲಾನಂದರನ್ನು ಭೇಟಿ ಮಾಡಿಸಿದರು. ಅವರ ಮಾತು ಕೇಳಿ ಮತ್ತೆ ಇವರು ಹಿಂದು ಧರ್ಮಕ್ಕೆ ಮರಳಿದರು. ನಂತರ ಎಚ್ಚೆತ್ತುಕೊಂಡ ಗ್ರಾಮಸ್ಥರು ರಾಮ ನವಮಿಯ ದಿನ ಊರಿನ ಹೊರಗೆ ಒಂದು ಬೋರ್ಡ್ ಹಾಕಿದರು. ಅದರಲ್ಲಿ ‘ಈ ಊರಿನಲ್ಲಿ ಹಿಂದುಗಳಷ್ಟೇ ಇದ್ದಾರೆ.
ಯಾರಾದರೂ ಹೊರಗಿನವರು ಬಂದು ಇಲ್ಲಿ ಬಲವಂತದ ಮತಾಂತರಕ್ಕೆ ಯತ್ನಿ ಸುವುದನ್ನು ನಿಷೇಧಿಸಲಾಗಿದೆ. – ಕೆಸಲಿಂಗಯಪಲ್ಲಿ ಗ್ರಾಮಸ್ಥರು’ ಎಂದು ಬರೆದು, ಜೈ ಶ್ರೀರಾಂ ಹಾಗೂ ‘ಧರ್ಮವನ್ನು ಬದಲಿಸುವುದು ತಾಯಿಯನ್ನೇ ಬದಲಿಸಿದಂತೆ’ ಎಂದೂ ಸೇರಿಸಿದರು.
ಅಂದಿನಿಂದ ಈ ಊರಿನಲ್ಲಿ ಮತಾಂತರ ನಡೆದಿಲ್ಲ. ಮತಾಂತರ ನಡೆಸಲು ಯಾರಾದರೂ ಯತ್ನಿಸಿದರೆ ಹೆಂಗಸರು ಪೊರಕೆ ಹಿಡಿದು ಮೆರವಣಿಗೆಯಲ್ಲಿ ಕರೆದೊಯ್ಯುವುದನ್ನೂ ರೂಢಿಸಿ ಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.