ಐದು ನಗರಗಳಲ್ಲಿ ಪ್ರತೀ ದಿನ ಪೆಟ್ರೋಲ್ ದರ ಪರಿಷ್ಕರಣೆ

By Suvarna Web DeskFirst Published Apr 12, 2017, 8:26 AM IST
Highlights

ವಿಶ್ವ ತೈಲಮಾರುಕಟ್ಟೆಯಲ್ಲಿ ದಿನನಿತ್ಯ ದರ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ನಿತ್ಯ ದರಪರಿಷ್ಕರಣೆ ಮಾಡಲು ನಿರ್ಧರಿಸಿರುವ ಸಾಧ್ಯತೆ ಇದೆ. ಐದು ನಗರಗಳಲ್ಲಿ ನಡೆಸಲಾಗುವ ಪ್ರಯೋಗ ಯಶಸ್ವಿಯಾದಲ್ಲಿ ದೇಶಾದ್ಯಂತ ಅದನ್ನು ಜಾರಿಗೊಳಿಸಲಾಗುತ್ತದೆ.

ನವದೆಹಲಿ(ಏ. 12): ತಿಂಗಳಿಗೆ ಎರಡು ಬಾರಿ ನಡೆಯುತ್ತಿದ್ದ ಇಂಧನ ದರ ಪರಿಷ್ಕರಣೆಯನ್ನು ಪ್ರತೀ ದಿನ ನಡೆಸಲು ಪೆಟ್ರೋಲಿಯಮ್ ಕಂಪನಿಗಳು ಯೋಜಿಸಿವೆ. ಅದರಂತೆ, ಮೇ 1ರಿಂದ ದೇಶದ 5 ನಗರಗಳಲ್ಲಿ ಪ್ರಾಯೋಗಿಕವಾಗಿ ಇದು ಜಾರಿಗೊಳ್ಳಲಿದೆ. ಸರಕಾರೀ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಮ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಮ್ ಸಂಸ್ಥೆಗಳು ಈ ನಿರ್ಧಾರ ಕೈಗೊಂಡಿವೆ. ಖಾಸಗಿ ಪೆಟ್ರೋಲಿಯಮ್ ರೀಟೇಲ್'ಗಳಾದ ರಿಲಾಯನ್ಸ್ ಇಂಡಸ್ಟ್ರೀಸ್, ಎಸ್ಸಾರ್ ಆಯಿಲ್ ಮೊದಲಾದ ಸಂಸ್ಥೆಗಳೂ ಕೂಡ ಇದಕ್ಕೆ ಒಪ್ಪುವ ಸಾಧ್ಯತೆ ಇದೆ.

ಯಾವ್ಯಾವ ನಗರಗಳಲ್ಲಿ ಯೊಸ ಯೋಜನೆ?
1) ಪುದುಚೇರಿ
2) ವೈಜಾಗ್
3) ಉದಯ್'ಪುರ್
4) ಜಮ್'ಶೆಡ್'ಪುರ್
5) ಚಂಡೀಗಡ್

click me!